ರಾಗ: [ಖರಹರಪ್ರಿಯ] ತಾಳ: [ಆದಿ]
on ರಾಘವೇಂದ್ರ
ತ್ರಾಹಿತ್ರಾಹಿ ಮಂತ್ರಾಲಯನಿಲಯ ಪ
ತ್ರಾಹಿತ್ರಾಹಿ ಮಂತ್ರಾಲಯ ಗುರುವೆ
ಸೂತ್ರನಪಿತಕೃಪಾಪಾತ್ರ ನೀನಹುದೊ1
ಧ್ಯಾನ ಮೌನ ಸುಜ್ಞಾನವಿಲ್ಲದಿಹ
ದೀನ ಜನರುದ್ಧಾರ ಗಂಭೀರ 2
ವಸುಧೆಯೊಳಗೆ ದಶಪ್ರಮತಿ ಸುಶಾಸ್ತ್ರವ
ಪ್ರಸರಿಸಿ ತೋರಿದ ಅಸಮಮಹಿಮನೆ3
ಮೂಕ ಬಧಿರ ಅಂಧಾದಿಗಳ ಕುಂದುಗಳ
ವ್ಯಾಕುಲ ಹರಿಪ ಕೃಪಾಕರ ಮೂರ್ತೇ 4
ಕರುಣಶರಧಿ ಸಿರಿರಮಣನ ಭಕುತಾಗ್ರಣಿ
ಸುಗುಣಗಣಾಭರಣಕೆಣೆಯೆ 5
ಬೇಡಿದಿಷ್ಟವ ನೀಡಿ ಕಾಪಾಡುವೆ
ಈಡುಗಾಣೆ ನಿನಗೀ ನಾಡೊಳು ಇನ್ನು 6
ಇಂದು ಮುಂದು ಎನ್ನ ಕುಂದುಗಳೆಣಿಸದೆ
ಕಂದನೆಂದು ಎನ್ನ ಮುಂದಕೆ ಕರೆಯೊ 7
ಕ್ಷೋಣಿಯೊಳಗೆ ನಿನಗಾರೆಣೆಕಾಣೆನೊ
ವೀಣೆವೆಂಕಟ ನೀ ಸಂಕಟ ಹರಿಸೊ 8
ಪಾಲಿಸಯ್ಯ ಪ್ರಹ್ಲಾದ ವ್ಯಾಸ ಭೂ
ನಲ್ಲ ನೀನಹುದೋ ಬಾಹ್ಲೀಕ ಪ್ರಭುವೇ 9
ಬಗೆ ಬಗೆ ಪಾಪೌಘಗಳನು ಕಳೆಯುವ
ರಘುಪತಿಕಿಂಕರ ಶ್ರೀ ರಾಘವೇಂದ್ರ 10
ಪವನಾಂತರಾತ್ಮ ಶ್ರೀ ವೇಂಕಟೇಶ ಪದ
ಕುವಲಯಕೆ ನೀ ಕುಮುದಬಾಂಧವ 11
ಶಂಕುಕರ್ಣ ಲಂಕೇಶನನುಜ ಶ್ರೀರಾಮ-
ಕಿಂಕರನಕಳಂಕಮೂರುತೇ12
ಮರುತಮತಾಬ್ಧಿಯ ಸಾರಸುಧೆಯನಿತ್ತೆ
ಉರಗಾದ್ರಿವಾಸವಿಠಲನ ದೂತ13
***
ತ್ರಾಹಿ ತ್ರಾಹಿ ಮಂತ್ರಾಲಯ ನಿಲಯ || PA ||
ತ್ರಾಹಿ ತ್ರಾಹಿ ಮಂತ್ರಾಲಯ ಗುರುವೆ
ಸೂತ್ರನಪಿತಕೃಪಾಪಾತ್ರ ನೀನಹುದೊ || 1 ||
ಧ್ಯಾನ ಮೌನ ಸುಜ್ಞಾನವಿಲ್ಲದಿಹ
ದೀನ ಜನರುದ್ಧಾರ ಗಂಭೀರ || 2 ||
ವಸುಧೆಯೊಳಗೆ ದಶಪ್ರಮತಿ ಸುಶಾಸ್ತ್ರವ
ಪ್ರಸರಿಸಿ ತೋರಿದ ಅಸಮಮಹಿಮನೆ || 3 ||
ಮೂಕ ಬಧಿರ ಅಂಧಾದಿಗಳ ಕುಂದುಗಳ
ವ್ಯಾಕುಲ ಹರಿಪ ಕೃಪಾಕರ ಮೂರ್ತೇ || 4 ||
ಕರುಣಶರಧಿ ಸಿರಿರಮಣನ ಭಕುತಾಗ್ರಣಿ
ಸುಗುಣಗಣಾಭರಣಕೆಣೆಯೆ || 5 ||
ಬೇಡಿದಿಷ್ಟವ ನೀಡಿ ಕಾಪಾಡುವೆ
ಈಡುಗಾಣೆ ನಿನಗೀ ನಾಡೊಳು ಇನ್ನು || 6 ||
ಇಂದು ಮುಂದು ಎನ್ನ ಕುಂದುಗಳೆಣಿಸದೆ
ಕಂದನೆಂದು ಎನ್ನ ಮುಂದಕೆ ಕರೆಯೊ || 7 ||
ಕ್ಷೋಣಿಯೊಳಗೆ ನಿನಗಾರೆಣೆಕಾಣೆನೊ
ವೀಣೆವೆಂಕಟ ನೀ ಸಂಕಟ ಹರಿಸೊ || 8 ||
ಪಾಲಿಸಯ್ಯ ಪ್ರಹ್ಲಾದ ವ್ಯಾಸ ಭೂ
ನಲ್ಲ ನೀನಹುದೋ ಬಾಹ್ಲೀಕ ಪ್ರಭುವೇ || 9 ||
ಬಗೆ ಬಗೆ ಪಾಪೌಘಗಳನು ಕಳೆಯುವ
ರಘುಪತಿಕಿಂಕರ ಶ್ರೀ ರಾಘವೇಂದ್ರ || 10 ||
ಪವನಾಂತರಾತ್ಮ ಶ್ರೀ ವೇಂಕಟೇಶ ಪದ
ಕುವಲಯಕೆ ನೀ ಕುಮುದಬಾಂಧವ || 11 ||
ಶಂಕುಕರ್ಣ ಲಂಕೇಶನನುಜ ಶ್ರೀರಾಮ-
ಕಿಂಕರನೆ ಅಕಳಂಕಮೂರುತೆ|| 12 ||
ಮರುತಮತಾಬ್ಧಿಯ ಸಾರಸುಧೆಯನಿತ್ತೆ
ಉರಗಾದ್ರಿವಾಸವಿಠಲನ ದೂತ || 13 ||
***
Trāhi trāhi mantrālaya nilaya || PA ||
trāhi trāhi mantrālaya guruve sūtranapitakr̥pāpātra nīnahudo || 1 ||
dhyāna mauna sujñānavilladiha dīna janarud’dhāra gambhīra || 2 ||
vasudheyoḷage daśapramati suśāstrava prasarisi tōrida asamamahimane || 3 ||
mūka badhira andhādigaḷa kundugaḷa vyākula haripa kr̥pākara mūrtē || 4 ||
karuṇaśaradhi siriramaṇana bhakutāgraṇi suguṇagaṇābharaṇakeṇeye || 5 ||
bēḍidiṣṭava nīḍi kāpāḍuve īḍugāṇe ninagī nāḍoḷu innu || 6 ||
indu mundu enna kundugaḷeṇisade kandanendu enna mundake kareyo || 7 ||
kṣōṇiyoḷage ninagāreṇekāṇeno vīṇeveṅkaṭa nī saṅkaṭa hariso || 8 ||
pālisayya prahlāda vyāsa bhū nalla nīnahudō bāhlīka prabhuvē || 9 ||
bage bage pāpaughagaḷanu kaḷeyuva raghupatikiṅkara śrī rāghavēndra || 10 ||
pavanāntarātma śrī vēṅkaṭēśa pada kuvalayake nī kumudabāndhava || 11 ||
śaṅkukarṇa laṅkēśananuja śrīrāma- kiṅkarane akaḷaṅkamūrutē || 12 ||
marutamatābdhiya sārasudheyanitte uragādrivāsaviṭhalana dūta || 13 ||
Plain English
Trahi trahi mantralaya nilaya || PA ||
trahi trahi mantralaya guruve sutranapitakrpapatra ninahudo || 1 ||
dhyana mauna sujnanavilladiha dina janarud’dhara gambhira || 2 ||
vasudheyolage dasapramati susastrava prasarisi torida asamamahimane || 3 ||
muka badhira andhadigala kundugala vyakula haripa krpakara murte || 4 ||
karunasaradhi siriramanana bhakutagrani sugunaganabharanakeneye || 5 ||
bedidistava nidi kapaduve idugane ninagi nadolu innu || 6 ||
indu mundu enna kundugalenisade kandanendu enna mundake kareyo || 7 ||
ksoniyolage ninagarenekaneno vinevenkata ni sankata hariso || 8 ||
palisayya prahlada vyasa bhu nalla ninahudo bahlika prabhuve || 9 ||
bage bage papaughagalanu kaleyuva raghupatikinkara sri raghavendra || 10 ||
pavanantaratma sri venkatesa pada kuvalayake ni kumudabandhava || 11 ||
sankukarna lankesananuja srirama- kinkarane akalankamurute || 12 ||
marutamatabdhiya sarasudheyanitte uragadrivasavithalana duta || 13 ||
***
No comments:
Post a Comment