ರಾಗ: [ಸುರುಟಿ] ತಾಳ: [ಮಿಶ್ರನಡೆ]
ಮಂಗಳಂ ಜಯ ಮಂಗಳಂ ಪ
ಮಂಗಳಂ ಗುರುರಾಘವೇಂದ್ರಗೆ
ಮಂಗಳಂ ಗುಣಸಾಂದ್ರಗೆ
ಮಂಗಳಂ ಯತಿಸಾರ್ವಭೌಮಗೆ
ಮಂಗಳಂ ಶುಭಕಾಯಗೆ ಅ.ಪ
ಅಲವಬೋಧಮತಾಭ್ಧಿಚಂದ್ರಗೆ
ಲಲಿತರೂಪದ ಸಾಂದ್ರಗೆ
ಸುಲಭವಾಗಿಹ ಸಂಯಮೀಂದ್ರಗೆ
ಜಲಜನಯನ ಸುರೇಂದ್ರಗೆ 1
ಸುಜನ ವಾರಿಜ ನಿಕರ ಸೂರ್ಯಗೆ
ಕುಜನ ಕಾನನ ಕೃಷ್ಣವತ್ರ್ಮಗೆ
ಭಜಕ ಜನರ ಸುರ ಕಾಮಧೇನುಗೆ
ವಿಜಯದಾಯಕ ವೀತಭಯಗೆ 2
ಕಂಬು ಚಕ್ರ ಸುಲಕ್ಷಣಾಂಕಗೆ
ಬಿಂಬ ಮೂರುತಿ ಪಾದ ಭಜಕಗೆ
ಕುಂಭಿಣೀತಲ ಸಾರ್ವಭೌಮಗೆ
ನಂಬಿ ಭಜಿಪರ ಪೊರೆವೊ ಕರುಣಿಗೆ 3
ವಾಯುದೇವಾವೇಶ ಶೇಷನು
ಮಾಯಾರಮಣ ಶಾಪದಿಂದಲಿ
ತೋಯನಿಧಿ ಪರಿವಸನ ತಳದಿ
ರಾಯನಾಗೀಪರಿಯ ಮೆರೆವಗೆ 4
ಮೊದಲು ತಾ ಪ್ರಹ್ಲಾದನೆನಿಸಿದ-
ನದರ ಹಿಂದಲೆ ವ್ಯಾಸರಾಯನು
ಇದರ ಹಿಂದಲೆ ರಾಘವೇಂದ್ರನು
ಪದುಮನಾಭನ ಮುದದಿ ಭಜಿಪಗೆ 5
ಮೂರುಜನುಮದಿ ಹರಿಯ ಶುಭತಮ
ಮೂರುಮೂರುತಿ ಪಾದ ಭಜಿಸಿ
ಧಾರುಣಿ ಜನತತಿಗಭೀಷ್ಟೆಯ
ಸೂರಿಕೊಡುತಲೆ ಮೆರೆವ ಧೀರಗೆ 6
ಧಾತನಾಂಡಕೆ ನಾಥನೆನಿಪ ವಿ-
ಧಾತ ಜನಕನ ಸಾರ ಮನದಲಿ
ಪ್ರೀತಿಯಿಂದಲಿ ಭಜಿಪ ಗುರುಜಗ-
ನ್ನಾಥವಿಠಲ ದೂತರಾಗ್ರಣಿಗೆ 7
***
No comments:
Post a Comment