ದಿನಗಳನು ಕಳೆವ ಜನರೆ ಸುಜನರು
ವನಜನಾಭನ ದಾಸರ ಸಮಾಗಮದಿಂದ ಪ.
ಅರುಣೋದಯದಲೆದ್ದು ಆಚಮನ ಕೃತಿಯಿಂದ
ಪರಿಶುದ್ಧರಾಗಿ ಇಹಪರಗಳಿಂದ
ಎರಡುವಿಧ ಸುಖವೀವ ಗುರುಮಧ್ವಮುನಿವರನ
ಪರಮಮತವಿಡಿದು ಹರಿಕಥಾಮೃತ ಸವಿದು 1
ಸ್ನಾನವನು ಮಾಡಿ ಸಂಕಲ್ಪಪೂರ್ವಕದಿ ಸಂ-
ಧ್ಯಾನ ಗಾಯಿತ್ರಿ ಗುರು ಮಂತ್ರ ಜಪವು
ಭಾನುನಾಮಕನಾದ ಪರಮಾತ್ಮನಂಘ್ರಿಯನು
ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ 2
ಶ್ರೀ ವಾಸುದೇವ ಅಡಿಗಡಿಗೆ ನೆನೆದು
ಪಾವಕಗೆ ಪ್ರಾತರಾಹುತಿಯನಿತ್ತು
ಭಾವಜ್ಞರಲಿ ಸಕಲಪುರಾಣಗಳ ಕೇಳಿ
ಹೂವು ಶ್ರೀತುಲಸಿವನಗಳ ಸೇವೆಯನು ಮಾಡಿ 3
ನದನದಿಗಳಲಿ ಸ್ನಾನವನು ಮಾಡಿ ಕಂಠÀದಲಿ
ಪದುಮಾಕ್ಷಿ ಶ್ರೀತುಲಸಿ ಮಾಲೆಗಳನು
ಮುದದಿಂದ ಧರಿಸಿ ಮಧ್ಯಾಹ್ನ ಕಾಲದಿ ಬ್ರಹ್ಮ ಯ-
ಜ್ಞ ದೇವ ಋಷಿ ಪಿತೃಗಳ ತೃಪ್ತಿಯನು ಬಡಿಸಿ4
ಸಾವಧಾನದಿ ತಂತ್ರಸಾರೋಕ್ತ ವಿಧಿಯಿಂದ
ದೇವಪೂಜೆಯ ಮಾಡಿ ದೇವೇಶಗೆ
ನೈವೇದ್ಯಗಳನಿಟ್ಟು ನಿತ್ಯತೃಪ್ತಗೆ ವೈಶ್ವ-
ದೇವ ಬಲಿಹರಣ ಅತಿಥಿ ಪೂಜೆಗಳಿಂದ 5
ಪರಮ ಹರುಷದಿಂದ ದೇವ ಪ್ರಸಾದವನು
ವರ ಮಾತೃ ಪಿತೃ ಸೋದರರು ಸಹಿತ
ಪರಮ ಸಖರ ಪಂಙÂ್ತ ಪಾವನರೊಡಗೂಡಿ
ನರಹರೆ ಎನುತ ಭೋಜನ ಮಾಡಿ ಮೋದಿಸುತ 6
ಸಾಯಾಹ್ನದಲಿ ಸಂಧ್ಯಾನ ಗಾಯಿತ್ರಿ ಜಪ
ಶ್ರೀಯರಸನಂಘ್ರಿ ಸೇವೆಯನು ಮಾಡಿ
ವಾಯುಸಖನೊಳಗಾಹುತಿಯನಿತ್ತು ಲಕ್ಷ್ಮೀನಾ-
ರಾಯಣನ ಗುಣಗಳನು ಪೊಗಳುತಲಿ 7
ತನುಮನವÀ ಶ್ರೀಹರಿಯಾಧೀನವ ಮಾಡಿ
ಅನುಸರಿಸಿ ಭಾಗ್ಯಬಡತನ ಎಣಿಸದೆ
ಮನವರಿತು ಹರಿಕೊಟ್ಟುದು ತನ್ನದಲ್ಲದೆ ಅಧಿಕ
ಅಣುಮಾತ್ರ ಬಾರದೆಂದು ಅಲ್ಪ ಸಂತುಷ್ಟನಾಗಿ8
ಈ ವಿಧದಿ ಅನುದಿನವಾಚರಿಸಿ ರಾತ್ರಿಯಲ್ಲೊಂದು
ಜಾವದಲಿ ತೋಷದಿಂ ನಿದ್ರೆಗೈದು
ಜಾವ ಜಾವಕೆ ಎದ್ದು ನೆರೆಹೊರೆಯು ಕೇಳ್ವಂತೆ
ಪಾವನ ಚರಿತ್ರ ಹಯವದನನ ನೆನೆದು 9
***
Pallavi
Dinagaḷanu kaḷeva janare sujanaru |
vanajanābhana dāsara samāgamadinda ||
Charaṇa 1
Aruṇōdayadale ddu āchamana kr̥tiyinda |
pariśud'dharāgi ihaparagaḷinda |
eraḍuvidha sukhavīva gurumadhvamunivarana |
paramamataviḍidu harikathāmr̥ta savidu ||
Charaṇa 2
Snānavanu māḍi saṅkalpapūrvakadi san- |
dhyāna gāyitri guru mantra japavu |
bhānunāmakanāda paramātmanāṅghriyanu |
dhyānavanu māḍi adhyayana pāṭhagaḷinda ||
Charaṇa 3
Śrī vāsudēva aḍigaḍige nenedu |
pāvakage prātarāhutiyanittu |
bhāvajñarali sakalapurāṇagaḷa kēḷi |
hūvu śrītuḷasivanagaḷa sēveyanu māḍi ||
Charaṇa 4
Nadanadigaḷali snānavanu māḍi kaṇṭhadali |
padumākṣi śrītuḷasi mālegaḷanu |
mudadinda dharisi madhyāhna kāladi brahma ya- |
jña dēva r̥ṣi pitr̥gaḷa tr̥ptiyanu baḍisi ||
Charaṇa 5
Sāvadhānadi tantrasārōkta vidhiyinda |
dēvapūjeya māḍi dēvēśage |
naivēdyagaḷaniṭṭu nityatr̥ptage vaiśva- |
dēva baliharaṇa atithi pūjegaḷinda ||
Charaṇa 6
Parama haruṣadinda dēva prasādavanu |
vara mātṟ pitṟ sōdararu sahita |
parama sakhara paṅktiyali pāvanaroḍagūḍi |
narahare enuta bhōjana māḍi mōdisuta ||
Charaṇa 7
Sāyāhṇadali sandhyāna gāyitri japa |
śrīyarasanaṅghri sēveyanu māḍi |
vāyusakhanōḷagāhutiyanittu lakṣmīnā- |
rāyaṇana guṇagaḷanu pogaḷutali ||
Charaṇa 8
Tanumanava śrīhariyādhīnavu māḍi |
anusarisi bhāgyabaḍatana eṇisade |
manavaritu harikoṭṭudu tannadallade adhika |
aṇumātra bāradendu alpa santuṣṭanāgi ||
Charaṇa 9
Ī vidhadi anudinavācharisi rātriyallondu |
jāvadali tōṣadin nidregai du |
jāva jāvake eddu nerehoreyu kēḷvante |
pāvana charitra hayavadanana nenedu ||
***
Pronunciation Guide
ā, ē, ī, ō, ū: Long vowels (pronounced with double the duration of short ones).
ḷ: Retroflex 'l' (tongue curls back to the roof of the mouth, as in kaḷeva).
ś: Soft 'sh' (as in pariśud'dharāgi).
ṣ: Hard/retroflex 'sh' (as in r̥ṣi or puṣpa).
r̥: Vocalic 'ri' sound (as in kr̥ti or tr̥pti).
ṅ: Nasal sound like the 'ng' in "song" (as in saṅkalpa).
***
ಶ್ರೀ ವಾದಿರಾಜ ತೀರ್ಥರು ರಚಿಸಿರುವ ಈ ಕೃತಿಯು ಒಬ್ಬ ಸತ್ಪುರುಷನು ಅಥವಾ ಹರಿಭಕ್ತನು ತನ್ನ ದೈನಂದಿನ ಜೀವನವನ್ನು ಹೇಗೆ ಕಳೆಯಬೇಕು ಎಂಬುದನ್ನು ತಿಳಿಸಿಕೊಡುವ ಸುಂದರವಾದ "ದಿನಚರಿ" ಅಥವಾ ಆಚಾರ ಸಂಹಿತೆಯಾಗಿದೆ.
ಸಾರಾಂಶ (Summary)
ಈ ಕೃತಿಯಲ್ಲಿ ವಾದಿರಾಜರು ಒಬ್ಬ ಹರಿಭಕ್ತನು ಸೂರ್ಯೋದಯದಿಂದ ಹಿಡಿದು ರಾತ್ರಿಯವರೆಗೆ ಮಾಡಬೇಕಾದ ಕರ್ತವ್ಯಗಳನ್ನು ವಿವರಿಸಿದ್ದಾರೆ. ಶೌಚ, ಸ್ನಾನ, ಸಂಧ್ಯಾವಂದನೆ, ಗುರುಮಧ್ವರ ಶಾಸ್ತ್ರಾಧ್ಯಯನ, ದೇವತಾರ್ಚನೆ, ಅತಿಥಿ ಸತ್ಕಾರ ಮತ್ತು ಭಗವಂತನ ಗುಣಗಾನ ಮಾಡುವುದೇ ಶ್ರೇಷ್ಠವಾದ ಜೀವನ. ಲಭ್ಯವಿರುವ ಅಲ್ಪಸಂಪತ್ತಿನಲ್ಲಿಯೇ ತೃಪ್ತಿಪಡುತ್ತಾ, ಸರ್ವವನ್ನೂ ಹರಿರ್ಪಣ ಬುದ್ಧಿಯಿಂದ ಮಾಡುವುದೇ ಮೋಕ್ಷಕ್ಕೆ ದಾರಿ ಎಂದು ಇಲ್ಲಿ ಬೋಧಿಸಲಾಗಿದೆ.
ಭಾವಾರ್ಥ (Paragraph-wise Meaning)
ಪಲ್ಲವಿ:
ದಿನಗಳನು ಕಳೆವ ಜನರೆ ಸುಜನರು | ವನಜನಾಭನ ದಾಸರ ಸಮಾಗಮದಿಂದ ||
ಅರ್ಥ: ಶ್ರೀಹರಿಯ ಭಕ್ತರ ಒಡನಾಟದಲ್ಲಿ ಕಾಲ ಕಳೆಯುವವರೇ ನಿಜವಾದ ಸತ್ಪುರುಷರು. ಅವರ ಸಹವಾಸದಿಂದ ದಿನವನ್ನು ಸಾರ್ಥಕಗೊಳಿಸಿಕೊಳ್ಳುವವರೇ ಭಾಗ್ಯವಂತರು.
ಚರಣ ೧:
ಅರ್ಥ: ಸೂರ್ಯೋದಯಕ್ಕಿಂತ ಮೊದಲೇ ಎದ್ದು (ಅರುಣೋದಯ), ಆಚಮನ ಮಾಡಿ ಶುದ್ಧರಾಗಬೇಕು. ಇಹ ಮತ್ತು ಪರ ಲೋಕಗಳ ಸುಖವನ್ನು ನೀಡುವ ಮಧ್ವಾಚಾರ್ಯರ ಮತವನ್ನು ಅನುಸರಿಸುತ್ತಾ, ಹರಿಕಥೆಯೆಂಬ ಅಮೃತವನ್ನು ಸವಿಯುತ್ತಾ ದಿನವನ್ನು ಆರಂಭಿಸಬೇಕು.
ಚರಣ ೨:
ಅರ್ಥ: ಶಾಸ್ತ್ರೋಕ್ತವಾಗಿ ಸಂಕಲ್ಪ ಮಾಡಿ ಸ್ನಾನ ಮಾಡಬೇಕು. ನಂತರ ಸಂಧ್ಯಾವಂದನೆ, ಗಾಯತ್ರಿ ಮಂತ್ರ ಹಾಗೂ ಗುರು ಮಂತ್ರಗಳ ಜಪ ಮಾಡಬೇಕು. ಸೂರ್ಯನ ಅಂತರ್ಯಾಮಿಯಾದ ಪರಮಾತ್ಮನ ಪಾದಗಳನ್ನು ಧ್ಯಾನಿಸುತ್ತಾ, ವೇದ-ಶಾಸ್ತ್ರಗಳ ಅಧ್ಯಯನ ಮತ್ತು ಪಾಠಗಳಲ್ಲಿ ತೊಡಗಬೇಕು.
ಚರಣ ೩:
ಅರ್ಥ: ಪ್ರತಿ ಹೆಜ್ಜೆಯಲ್ಲೂ ಶ್ರೀ ವಾಸುದೇವನನ್ನು ಸ್ಮರಿಸಬೇಕು. ಅಗ್ನಿಕಾರ್ಯ (ಹೋಮ) ಮಾಡಿ ಪ್ರಾತರಾಹುತಿಯನ್ನು ನೀಡಬೇಕು. ಜ್ಞಾನಿಗಳಿಂದ ಪುರಾಣ ಶ್ರವಣ ಮಾಡಬೇಕು ಹಾಗೂ ಭಗವಂತನ ಪೂಜೆಗಾಗಿ ಹೂವು ಮತ್ತು ತುಳಸಿ ವನಗಳ ಸೇವೆಯನ್ನು (ಬೆಳೆಸುವುದು/ಆರಿಸುವುದು) ಮಾಡಬೇಕು.
ಚರಣ ೪:
ಅರ್ಥ: ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ, ಕೊರಳಿನಲ್ಲಿ ತುಳಸಿ ಮತ್ತು ಪದ್ಮಾಕ್ಷಿ ಮಾಲೆಗಳನ್ನು ಭಕ್ತಿಯಿಂದ ಧರಿಸಬೇಕು. ಮಧ್ಯಾಹ್ನ ಕಾಲದಲ್ಲಿ ಬ್ರಹ್ಮಯಜ್ಞವನ್ನು ಮಾಡಿ ದೇವತೆಗಳು, ಋಷಿಗಳು ಮತ್ತು ಪಿತೃಗಳಿಗೆ ತರ್ಪಣ ನೀಡಿ ಅವರನ್ನು ತೃಪ್ತಿಪಡಿಸಬೇಕು.
ಚರಣ ೫:
ಅರ್ಥ: ತಂತ್ರಸಾರೋಕ್ತವಾದ ವಿಧಿಯಂತೆ ಸಾವಧಾನವಾಗಿ ದೇವಪೂಜೆ ಮಾಡಬೇಕು. ದೇವದೇವನಾದ ಹರಿಗೆ ನೈವೇದ್ಯ ಅರ್ಪಿಸಿ, ನಂತರ ವೈಶ್ವದೇವ, ಬಲಿಹರಣ ಮತ್ತು ಅತಿಥಿ ಸತ್ಕಾರದಂತಹ ಪಂಚಮಹಾಯಜ್ಞಗಳನ್ನು ಪೂರೈಸಬೇಕು.
ಚರಣ ೬:
ಅರ್ಥ: ಅತ್ಯಂತ ಸಂತೋಷದಿಂದ ದೇವಪ್ರಸಾದವನ್ನು ಸ್ವೀಕರಿಸಬೇಕು. ತಂದೆ-ತಾಯಿ, ಸಹೋದರರು ಮತ್ತು ಸಜ್ಜನರಾದ ಸ್ನೇಹಿತರ ಪಂಕ್ತಿಯಲ್ಲಿ ಕುಳಿತು, "ನರಹರಿ" ಎಂದು ಭಗವಂತನನ್ನು ಸ್ಮರಿಸುತ್ತಾ ಭೋಜನ ಮಾಡಬೇಕು.
ಚರಣ ೭:
ಅರ್ಥ: ಸಾಯಂಕಾಲದಲ್ಲಿ ಪುನಃ ಸಂಧ್ಯಾವಂದನೆ ಮತ್ತು ಗಾಯತ್ರಿ ಜಪ ಮಾಡಬೇಕು. ಲಕ್ಷ್ಮೀಪತಿಯಾದ ಹರಿಯ ಪಾದಸೇವೆ ಮಾಡುತ್ತಾ, ಅಗ್ನಿಯಲ್ಲಿ ಆಹುತಿ ನೀಡಿ ಲಕ್ಷ್ಮೀನಾರಾಯಣನ ಅನಂತ ಗುಣಗಳನ್ನು ಕೊಂಡಾಡಬೇಕು.
ಚರಣ ೮:
ಅರ್ಥ: ತನು-ಮನಗಳನ್ನು ಶ್ರೀಹರಿಗೆ ಅರ್ಪಿಸಬೇಕು. ಜೀವನದಲ್ಲಿ ಬರುವ ಸುಖ-ದುಃಖ ಅಥವಾ ಬಡತನ-ಭಾಗ್ಯಗಳನ್ನು ಸಮಾನವಾಗಿ ಕಾಣಬೇಕು. ದೇವರು ಕೊಟ್ಟಿದ್ದಕ್ಕಿಂತ ಒಂದು ಅಣುಮಾತ್ರವೂ ಅಧಿಕವಾಗಿ ನಮಗೆ ದೊರೆಯದು ಎಂದು ಅರಿತು, ಸಿಕ್ಕ ಅಲ್ಪದರಲ್ಲಿಯೇ ಸಂತೋಷದಿಂದ ಇರಬೇಕು.
ಚರಣ ೯:
ಅರ್ಥ: ಈ ರೀತಿಯಾಗಿ ದಿನವಿಡೀ ಆಚರಿಸಿ, ರಾತ್ರಿಯ ಒಂದು ಜಾವ ಮಾತ್ರ ನಿದ್ರೆ ಮಾಡಬೇಕು. ಪ್ರತಿ ಜಾವಕ್ಕೆ ಎದ್ದು ನೆರೆಹೊರೆಯವರಿಗೆ ಕೇಳಿಸುವಂತೆ ಪವಿತ್ರ ಚರಿತ್ರೆಯುಳ್ಳ "ಹಯವದನ"ನನ್ನು (ವಾದಿರಾಜರ ಅಂಕಿತ) ಸ್ಮರಿಸುತ್ತಾ ಕಾಲ ಕಳೆಯಬೇಕು.
ಈ ಕೃತಿಯು ಹರಿಭಕ್ತರಿಗೆ ಒಂದು ಮಾರ್ಗದರ್ಶಿಯಂತಿದೆ.
***
Composed by Shri Vadiraja Tirtha, this song is a comprehensive "daily code of conduct" (Dinachari) for a seeker. It outlines how a true devotee of the Lord should spend every moment from dawn until dusk in spiritual awareness.
Summary
The song emphasizes that "good people" (Sujanaru) are those who spend their days in the company of the Lord's devotees. It provides a step-by-step guide to a disciplined life: starting with early rising, purification, and study, moving to ritual worship and service, and concluding with a night spent in the contemplation of the Lord. The central philosophy is one of Santushti (contentment)—accepting what the Lord provides without greed and dedicating all actions to Him.
Stanza-wise Meaning
Pallavi
Dinagaḷanu kaḷeva janare sujanaru | Vanajanābhana dāsara samāgamadinda ||
Meaning: Those who spend their days in the company and assembly of the servants of Lord Padmanabha (the lotus-navelled one) are the truly virtuous people.
Stanza 1
Meaning: Rising at dawn (Arunodaya), one should perform purification (Achamana) to become pure in both this world and the next. Following the supreme path of Guru Madhvacharya, one should begin the day by tasting the nectar of Hari's stories (Harikathamruta).
Stanza 2
Meaning: After taking a ritual bath with a holy resolve (Sankalpa), one should perform Sandhyavandana and chant the Gayatri and Guru mantras. Meditating on the feet of the Supreme Being who resides within the Sun, one should spend time in study and teaching of the scriptures.
Stanza 3
Meaning: Remembering Lord Vasudeva at every step, offer morning oblations to the sacred fire (Pavaka). Listen to the Puranas from learned scholars and perform service in the flower and Tulsi gardens for the Lord’s worship.
Stanza 4
Meaning: Bathe in sacred rivers and joyfully wear malas made of Tulsi and Padmakshi beads around the neck. During the afternoon, perform Brahma-Yajna to satisfy the Devas, Sages, and Ancestors (Pithrus).
Stanza 5
Meaning: With focus and calm, perform the Deva-puja according to the Tantrasara tradition. Offer Naivedya to the Lord of Lords and then perform the daily sacrifices like Vaishvadeva and Bali-harana, followed by the honoring of guests (Atithi Puja).
Stanza 6
Meaning: With great joy, partake in the Lord's Prasada along with parents, siblings, and virtuous friends. Eat with a sense of delight while chanting the name "Narahari."
Stanza 7
Meaning: In the evening, perform Sandhyavandana and Gayatri Japa again. Serve at the feet of the Lord of Lakshmi, offer oblations to the fire, and sing the infinite glories and qualities of Lakshmi-Narayana.
Stanza 8
Meaning: Surrender your body and mind to Shri Hari. Do not worry about fortune or poverty; realize that everything given is by Hari's will. Understanding that not even an atom-sized gain comes without His grace, live with "Alpa Santushta" (being happy with whatever little is received).
Stanza 9
Meaning: Following this routine daily, take peaceful sleep for just one watch (three hours) of the night. Wake up at every watch (Java) and, loud enough for the neighborhood to hear, contemplate the sacred history of Hayavadana (Lord Vishnu, and the signature of Vadirajaru).
***
Dinagalanu kaleva janre sujanaro
Vanaja naabhana daasa jana samaagama dinda
Arunodayadaleddu aachamana kruthyindha |
Parisuddharaagi iha paragalinda ||
Yeradu vidha sukha veeva guru madhwa muni varara |
Parama matha pididu Hari charitha amruthava savidu ||1||
Snaanavanu maadi sankalpa poorvakadi San- |
-dhyaana Gaayathri guru manthra japici ||
Bhaanu namagalaadha paramaathananghrigala |
Dhyaanavanu Maadi adhyayana paatagalinda ||2||
Sri vaasudevananu adigadige nene nenedu |
Paavakake pratharaahu yaniththu ||
Bhavagnarali sakala pouraanagala keli |
Hoovu Sri thulasee vanagalanu sevisutha ||3||
Nadhi nadhigallali snanavu maadi kandathalli
Pathumakshi sri tulasi malegalanu
Muthadhindha darisi madhyana kaaladhu brahmaya yag
Na deva rishi pithrugala trupthiyanu padisi ||4||
Saavadhaanadi thantra saarokta vidhi yinda |
Deva Poojeya maadi devesage ||
Naivedyagalaniththu nithya thruptage vaishva – |
Deva baliharana athithi pooje maaduththa ||5||
Parama harushadali deva prasaadavanu |
Vara maathru pithararu sodararu sahitha ||
Parama soukhyadi pankthi paavana oda goodi |
Nara hare yanutha bhojana maadi muda dinda ||6||
Saayanha samaya sandhyaana Gayathree japa |
Sreeyarasanaghrigala pooje yanu maadi ||
Vaayu sakha mukha dalaahuthi yiththu Lakshmee Naa _
_raayanan gaayanavee kondaaduththaa higguththa ||7||
Thanu manava srihariya dinavu maadi
Anu sarisi bhagyapada dana enisadhe
Mana varithu hari kottadhu thannathallade adhiga
Anumaathra baarathendu alpa santhustanaagi ||8||
Ee vidhadi dinagalanu kaledu raathriyalondu |
Jhavada nanthara sukhadi malagi ||
Jhava jhavadoleddu Nere Horeya kelvanthe |
Paavanna charitha Hayavadhanana smaritsuththa ||9||
***
pallavi
dinagaLanu kaLeva janarE sujanaru
anupallavi
vanajanAbhana dAsajana samAgamAdinda
caraNam 1
aruNOdayadoLeddu Acamanakrutyadali parishuddharAgi ihaparagaLinda
eraDuvidha sukhavIva gurumadhvamunivarara parama mata piDidu haricaritAmrutava savidu
caraNam 2
snAnavanu mADi sankalpa pUrvakadi sandhyAna gAyatri gurumantra japisi
bhAnugarghyavanittu paramAtmananghrigaLa dhyAnavanu mADi adhyayana pAThagaLinda
caraNam 3
shrI vAsudEvana aDigaDige nenenedu pAvakage prAtarAhutiyanittu
bhAvajnarali sakala paurANagaLa kELi hUvu shrI tuLasi vanagaLanu sEvisuta
caraNam 4
sAvadhAnadi tantra sArOkta vidhiyinda dEvapUjeya mADi dEvEshage
naivEdyagaLanittu nitya truptige vaishvadEva baliharaNa atithi pUje mADutta
caraNam 5
parama harSadi dEvaprasAdavanu vara mAtru pitru sOdararu sahita
parama soukhyadi pangtA pAvanara oDagUDi naraharE enuta bhOjanamADi mudadinda
caraNam 6
sAyAhna samaya sandhyAna gAyatri japa shrIyarasananghrigaLa pUjeyanu mADi
vAyusakha mukhadalAhutiyittu lakSmI nArAyaNana gAyanadi koNDADi pogaLutta
caraNam 7
I vidhadhi dinagaLanu kaLedu rAtriyalondu jhAvadanantara sukhadi malagi
jhAva jhAvadoLeddu nerehoreyu kELvante pAvana carita hayavadananna smarisutta
***
ದಿನಗಳನು ಕಳೆವ ಜನರೆ ಸುಜನರೋ
ವನಜನಾಭನ ದಾಸರ ಸಮಾಗಮದಿಂದ ||pa||
ಅರುಣೋದಯದಲೆದ್ದು ಆಚಮನ ಕೃತಿಯಿಂದ
ಪರಿಶುದ್ಧರಾಗಿ ಇಹಪರಗಳಿಂದ
ಎರಡುವಿಧ ಸುಖವೀವ ಗುರುಮಧ್ವಮುನಿವರನ
ಪರಮಮತವಿಡಿದು ಹರಿಕಥಾಮೃತ ಸವಿದು||1||
ಸ್ನಾನವನು ಮಾಡಿ ಸಂಕಲ್ಪಪೂರ್ವಕದಿ ಸಂ-
ಧ್ಯಾನ ಗಾಯಿತ್ರಿ ಗುರು ಮಂತ್ರ ಜಪವು
ಭಾನುನಾಮಕನಾದ ಪರಮಾತ್ಮನಂಘ್ರಿಯನು
ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ ||2||
ಶ್ರೀ ವಾಸುದೇವ ಅಡಿಗಡಿಗೆ ನೆನೆದು
ಪಾವಕಗೆ ಪ್ರಾತರಾಹುತಿಯನಿತ್ತು
ಭಾವಜ್ಞರಲಿ ಸಕಲಪುರಾಣಗಳ ಕೇಳಿ
ಹೂವು ಶ್ರೀತುಲಸಿವನಗಳ ಸೇವೆಯನು ಮಾಡಿ ||3||
ನದಿನದಗಳಲಿ ಸ್ನಾನವನು ಮಾಡಿ ಕಂಠದಲಿ
ಪದುಮಾಕ್ಷಿ ಶ್ರೀತುಲಸಿ ಮಾಲೆಗಳನು
ಮುದದಿಂದ ಧರಿಸಿ ಮಧ್ಯಾಹ್ನ ಕಾಲಕ್ಕೆ ಬ್ರಹ್ಮ ಯ-
ಜ್ಞ ದೇವ ಋಷಿ ಪಿತೃಗಳ ತೃಪ್ತಿಯನು ಬಡಿಸಿ||4||
ಸಾವಧಾನದಿ ತಂತ್ರಸಾರೋಕ್ತ ವಿಧಿಯಿಂದ
ದೇವಪೂಜೆಯ ಮಾಡಿ ದೇವೇಶಗೆ
ನೈವೇದ್ಯಗಳನಿಟ್ಟು ನಿತ್ಯತೃಪ್ತಗೆ ವೈಶ್ವ-
ದೇವ ಬಲಿಹರಣ ಅತಿಥಿ ಪೂಜೆಗಳಿಂದ ||5||
ಪರಮ ಹರುಷದಿಂದ ದೇವ ಪ್ರಸಾದವನು
ವರ ಮಾತೃ ಪಿತೃ ಸೋದರರು ಸಹಿತ
ಪರಮ ಸೌಖ್ಯದಿ ಪಂಕ್ತಿ ಪಾವನರರೊಡಗೂಡಿ
ನರಹರೆ ಎನುತ ಭೋಜನ ಮಾಡಿ ಮೋದಿಸುತ ||6||
ಸಾಯಾಹ್ನದಲಿ ಸಂಧ್ಯಾನ ಗಾಯಿತ್ರಿ ಜಪ
ಶ್ರೀಯರಸನಂಘ್ರಿ ಸೇವೆಯನು ಮಾಡಿ
ವಾಯುಸಖನೊಳಗಾಹುತಿಯನಿತ್ತು ಲಕ್ಷ್ಮೀನಾ-
ರಾಯಣನ ಗುಣಗಳನು ಪೊಗಳುತಲಿ ||7||
ತನುಮನವ ಶ್ರೀಹರಿಯಾಧೀನವ ಮಾಡಿ
ಅನುಸರಿಸಿ ಭಾಗ್ಯಬಡತನ ಎಣಿಸದೆ
ಮನವರಿತು ಹರಿಕೊಟ್ಟುದು ತನ್ನದಲ್ಲದೆ ಅಧಿಕ
ಅಣುಮಾತ್ರ ಬಾರದೆಂದು ಅಲ್ಪ ಸಂತುಷ್ಟನಾಗಿ||8||
ಈ ವಿಧದಿ ಅನುದಿನವಾಚರಿಸಿ ರಾತ್ರಿಯಲ್ಲೊಂದು
ಜಾವದಲಿ ತೋಷದಿಂ ನಿದ್ರೆಗೈದು
ಜಾವ ಜಾವಕೆ ಎದ್ದು ನೆರೆಹೊರೆಯು ಕೇಳ್ವಂತೆ
ಪಾವನ ಚರಿತ್ರ ಹಯವದನನ ನೆನೆದು ||9||
***
Dinagalanu kaleva janare sujanaro
Vanaja naabhana daasara samaagama dinda
Arunodayadaleddu aachamana kruthyindha |
Parishuddharaagi iha paragalinda ||
Yeradu vidha sukha veeva guru madhwa muni varara |
Parama matha pididu Hari kathamruta savidu ||1||
Snaanavanu maadi sankalpa poorvakadi San- |
-dhyaana Gaayatri guru mantra japisi ||
Bhaanu naamakanaada paramatmananghrigala |
Dhyaanavanu maadi adhyayana paathagalinda ||2||
Sri vaasudevana adigadige nenedu |
Paavakage praataraahutiyanittu ||
Bhavagnarali sakala puraanagala keli |
Hoovu Shri tulasi vanagala seveyanu madi ||3||
Nadi nadagallali snanavu maadi kanthadalli
Padumakshi shri tulasi malegalanu
Mudadinda dharisi madhyana kaalakke brahma yagna deva rishi pithrugala trupti padisi ||4||
Saavadhaanadi tantra saarokta vidhi yinda |
Deva Poojeya maadi deveshage ||
Naivedyagalanittu nitya truptage vaishva – |
Deva baliharana athithi pooje galinda ||5||
Parama harushadinda deva prasaadavanu |
Vara maatru pitru sodarara sahita ||
Parama soukhyadi pankthi pavanararoda goodi |
Nara hare yanuta bhojana maadi muda dinda ||6||
Saayahna dali sandhyaana Gayatri japa |
Shreeyarasanaghri seveyanu maadi ||
Vaayu sakhanolagaahutiyanittu Lakshmi
Narayanana gunagalanu pogalutali ||7||
Tanu manava srihariyadhinava maadi
Anu sarisi bhagya badatna yenisade
Mana varitu hari kottudu tannadallade adhika
Anumaatra baaradendu alpa santhustanaagi ||8||
Ee vidhadi anudinava achirisi raathriyalondu |
Jhavadalli toshadim nidre gaidu ||
Jhava jhavake eddu nere horeyu kelvante |
Paavanna charita Hayavadanana nene nenedu ||9||
***
ದಿನಗಳನು ಕಳೆವ ಜನರೆ ಸುಜನರೋ
ವನಜನಾಭನ ದಾಸರ ಸಮಾಗಮದಿಂದ ||pa||
ಅರುಣೋದಯದಲೆದ್ದು ಆಚಮನ ಕೃತಿಯಿಂದ
ಪರಿಶುದ್ಧರಾಗಿ ಇಹಪರಗಳಿಂದ
ಎರಡುವಿಧ ಸುಖವೀವ ಗುರುಮಧ್ವಮುನಿವರನ
ಪರಮಮತವಿಡಿದು ಹರಿಕಥಾಮೃತ ಸವಿದು||1||
ಸ್ನಾನವನು ಮಾಡಿ ಸಂಕಲ್ಪಪೂರ್ವಕದಿ ಸಂ-
ಧ್ಯಾನ ಗಾಯಿತ್ರಿ ಗುರು ಮಂತ್ರ ಜಪವು
ಭಾನುನಾಮಕನಾದ ಪರಮಾತ್ಮನಂಘ್ರಿಯನು
ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ ||2||
ಶ್ರೀ ವಾಸುದೇವ ಅಡಿಗಡಿಗೆ ನೆನೆದು
ಪಾವಕಗೆ ಪ್ರಾತರಾಹುತಿಯನಿತ್ತು
ಭಾವಜ್ಞರಲಿ ಸಕಲಪುರಾಣಗಳ ಕೇಳಿ
ಹೂವು ಶ್ರೀತುಲಸಿವನಗಳ ಸೇವೆಯನು ಮಾಡಿ ||3||
ನದಿನದಗಳಲಿ ಸ್ನಾನವನು ಮಾಡಿ ಕಂಠದಲಿ
ಪದುಮಾಕ್ಷಿ ಶ್ರೀತುಲಸಿ ಮಾಲೆಗಳನು
ಮುದದಿಂದ ಧರಿಸಿ ಮಧ್ಯಾಹ್ನ ಕಾಲಕ್ಕೆ ಬ್ರಹ್ಮ ಯ-
ಜ್ಞ ದೇವ ಋಷಿ ಪಿತೃಗಳ ತೃಪ್ತಿಯನು ಬಡಿಸಿ||4||
ಸಾವಧಾನದಿ ತಂತ್ರಸಾರೋಕ್ತ ವಿಧಿಯಿಂದ
ದೇವಪೂಜೆಯ ಮಾಡಿ ದೇವೇಶಗೆ
ನೈವೇದ್ಯಗಳನಿಟ್ಟು ನಿತ್ಯತೃಪ್ತಗೆ ವೈಶ್ವ-
ದೇವ ಬಲಿಹರಣ ಅತಿಥಿ ಪೂಜೆಗಳಿಂದ ||5||
ಪರಮ ಹರುಷದಿಂದ ದೇವ ಪ್ರಸಾದವನು
ವರ ಮಾತೃ ಪಿತೃ ಸೋದರರು ಸಹಿತ
ಪರಮ ಸೌಖ್ಯದಿ ಪಂಕ್ತಿ ಪಾವನರರೊಡಗೂಡಿ
ನರಹರೆ ಎನುತ ಭೋಜನ ಮಾಡಿ ಮೋದಿಸುತ ||6||
ಸಾಯಾಹ್ನದಲಿ ಸಂಧ್ಯಾನ ಗಾಯಿತ್ರಿ ಜಪ
ಶ್ರೀಯರಸನಂಘ್ರಿ ಸೇವೆಯನು ಮಾಡಿ
ವಾಯುಸಖನೊಳಗಾಹುತಿಯನಿತ್ತು ಲಕ್ಷ್ಮೀನಾ-
ರಾಯಣನ ಗುಣಗಳನು ಪೊಗಳುತಲಿ ||7||
ತನುಮನವ ಶ್ರೀಹರಿಯಾಧೀನವ ಮಾಡಿ
ಅನುಸರಿಸಿ ಭಾಗ್ಯಬಡತನ ಎಣಿಸದೆ
ಮನವರಿತು ಹರಿಕೊಟ್ಟುದು ತನ್ನದಲ್ಲದೆ ಅಧಿಕ
ಅಣುಮಾತ್ರ ಬಾರದೆಂದು ಅಲ್ಪ ಸಂತುಷ್ಟನಾಗಿ||8||
ಈ ವಿಧದಿ ಅನುದಿನವಾಚರಿಸಿ ರಾತ್ರಿಯಲ್ಲೊಂದು
ಜಾವದಲಿ ತೋಷದಿಂ ನಿದ್ರೆಗೈದು
ಜಾವ ಜಾವಕೆ ಎದ್ದು ನೆರೆಹೊರೆಯು ಕೇಳ್ವಂತೆ
ಪಾವನ ಚರಿತ್ರ ಹಯವದನನ ನೆನೆದು ||9||
***
Dinagalanu kaleva janare sujanaro
Vanaja naabhana daasara samaagama dinda
Arunodayadaleddu aachamana kruthyindha |
Parishuddharaagi iha paragalinda ||
Yeradu vidha sukha veeva guru madhwa muni varara |
Parama matha pididu Hari kathamruta savidu ||1||
Snaanavanu maadi sankalpa poorvakadi San- |
-dhyaana Gaayatri guru mantra japisi ||
Bhaanu naamakanaada paramatmananghrigala |
Dhyaanavanu maadi adhyayana paathagalinda ||2||
Sri vaasudevana adigadige nenedu |
Paavakage praataraahutiyanittu ||
Bhavagnarali sakala puraanagala keli |
Hoovu Shri tulasi vanagala seveyanu madi ||3||
Nadi nadagallali snanavu maadi kanthadalli
Padumakshi shri tulasi malegalanu
Mudadinda dharisi madhyana kaalakke brahma yagna deva rishi pithrugala trupti padisi ||4||
Saavadhaanadi tantra saarokta vidhi yinda |
Deva Poojeya maadi deveshage ||
Naivedyagalanittu nitya truptage vaishva – |
Deva baliharana athithi pooje galinda ||5||
Parama harushadinda deva prasaadavanu |
Vara maatru pitru sodarara sahita ||
Parama soukhyadi pankthi pavanararoda goodi |
Nara hare yanuta bhojana maadi muda dinda ||6||
Saayahna dali sandhyaana Gayatri japa |
Shreeyarasanaghri seveyanu maadi ||
Vaayu sakhanolagaahutiyanittu Lakshmi
Narayanana gunagalanu pogalutali ||7||
Tanu manava srihariyadhinava maadi
Anu sarisi bhagya badatna yenisade
Mana varitu hari kottudu tannadallade adhika
Anumaatra baaradendu alpa santhustanaagi ||8||
Ee vidhadi anudinava achirisi raathriyalondu |
Jhavadalli toshadim nidre gaidu ||
Jhava jhavake eddu nere horeyu kelvante |
Paavanna charita Hayavadanana nene nenedu ||9||
***
No comments:
Post a Comment