Sunday, 7 November 2021

ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿ ankita vasudeva vittala NAANYAKE CHINTISALI NAANYAKE DHENISALI



ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿ
ತಾನಾಗಿ ಶ್ರೀ ರಾಘವೇ೦ದ್ರಯತಿ ಒಲಿದ        || ಪ ||

ಪೋರತನದವನು ಎರಡು ಥೆರೆಗಳಲಿ
ದೂರಾಗಿ ಮೊರೆಯು ಅಲ್ಲವೆ೦ದು
ಕಾರುಣ್ಯದಿ೦ದ ತಮ್ಮಯ ಗುರುತುಗಳ ತೋರಿ
ಧೀರ ತಾ ಕರವನ್ನು ಪಿಡಿದ ಬಳಿಕಾ        || ೧ ||

ಜಗದೊಳಗೆ ಪದಾರ್ಥಗಳು ಗುಣದಿ ಭು೦ಜಿಸುವ೦ಗೆ
ಆಗದ೦ಕರನು ತಾನು ಬಳಿಗೆ ಬ೦ದು
ಬಗೆ ಬಗೆಯಿ೦ದಲ್ಲಿ ಸುರಸಪದಾರ್ಥಗಳು
ಸೊಗಸಾಗಿ ಉಣಿಸಲು ಚಿ೦ತೆಯು೦ಟೆ            || ೨ ||

ಪೂರ್ಣಜಲ ಹರಿವ ವಾಹಿನಿ ಕ೦ಡು ಬೆದರುವಗೆ
ಕರಣಧಾರನು ತಾನೆ ಬ೦ದು ನಿ೦ದು
ತೂರ್ಣದಲಿ ಕರಪಿಡಿದು ಹರಿಗೋಲು ಒಳಗಿಟ್ಟು
ಘೂರ್ಣಿಸಲು ಅವನಿಗೆ ಚಿ೦ತೆಯು೦ಟೆ        || ೩ ||

ತನ್ನಯ ಹಿತವು ತಾ ವಿಚಾರಿಸಲವ೦ಗೆ
ಚೆನ್ನಾಗಿ ಪರಮಗುರು ತಾನೆ ಬ೦ದು
ಸನ್ಮಾರ್ಗವನು ತಾನೆ ಪೇಳುವೆನೆನಲು
ಇನ್ನು ಆಯಾಸ ಉ೦ಟೆ            || ೪ ||

ಏಸು ಜನ್ಮದಲಿ ಅರ್ಚಿಸಿದೆನೋ ನಾ ಇನ್ನು
ವಾಸುದೇವವಿಠ್ಠಲ ಪಾದಪದುಮ
ಲೇಸಾಗಿ ಈ ಸುಕೃತದಿ೦ದೆನ್ನ ಹರಿದಾಸ
ಈ ಸುಗುಣ ಗುರುರಾಯ ಎನಗೆ ಒಲಿದ    || ೫ ||
****

ರಾಗ ಕಾಂಬೋಜಿ/ಮುಖಾರ ತಾಳ ಝಂಪೆ (raga, taala may differ in audio)

ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿ

ತಾನಾಗಿ ಶ್ರೀರಾಘವೇಂದ್ರಯತಿ ಒಲಿದ

ಪೋರತನದವನು ಎರಡು ತೆರೆಗಳಲ್ಲಿ

ದೂರಾಗಿ ಮೊರೆಯು ಇಲ್ಲವೆಂದು

ಕಾರುಣ್ಯದಿಂದ ತಮ್ಮಯ ಗುರುತುಗಳ ತೋರಿ

ಧೀರ ತಾ ಕರವನ್ನು ಪಿಡಿದ ಬಳಿಕ 1

ಜಗದೊಳಗೆ ಪದಾರ್ಥಗಳ ಗುಣದಿ ಭುಂಜಿಸುವಂಗೆ

ಅಗದಂಕರನು ತಾನು ಬಳಿಗೆ ಬಂದು

ಬಗೆಬಗೆಯಿಂದಲಿ ಸುರಸ ಪದಾರ್ಥಗಳು

ಸೊಗಸಾಗಿ ಉಣಿಸಲು ಚಿಂತೆಯುಂಟೆ 2

ಪೂರ್ಣಜಲ ಹರಿವ ವಾಹಿನಿ ಕಂಡು ಬೆದರುವಗೆ

ಕರ್ಣಧಾರನು ತಾನೆ ಬಂದು ನಿಂದು

ತೂರ್ಣದಲಿ ಕರಪಿಡಿದು ಹರಿಗೋಲ ಒಳಗಿಟ್ಟು

ಫೂರ್ಣಿಸಲು ಅವನಿಗೆ ಚಿಂತೆಯುಂಟೆ 3

ತನ್ನಯ ಹಿತವು ತಾ ವಿಚಾರಿಸಲವಂಗೆ

ಚೆನ್ನಾಗಿ ಪರಮ ಗುರು ತಾನೆ ಬಂದು

ಸನ್ಮಾರ್ಗವನು ತಾನೆ ಪೇಳುವೆನೆನಲು

ಇನ್ನು ಆಯಾಸವುಂಟೆ 4

ಏಸು ಜನ್ಮದಲಿ ಅರ್ಚಿಸಿದೆನೊ ನಾ ಇನ್ನು

ವಾಸುದೇವವಿಠಲ ಪಾದಪದುಮ

ಲೇಸಾಗಿ ಈ ಸುಕೃತದಿಂದೆನ್ನ ಹರಿದಾಸ

ಈ ಸುಗುಣ ಗುರುರಾಯ ಎನಗೆ ಒಲಿದ 5

***


No comments:

Post a Comment