..
ಎಲ್ಲಮ್ಮಾದೇವಿ ನಮ್ಮ ದೇವರು ಬಂದರು ಕಾಣ ಪ.
ಸೋಮಾಸುರನೆಂಬ ದೈತ್ಯನು
ಸಾಮಕ ವೇದವನೊಯ್ಯಲು ಮಾ
ಸೋಮಾಸುರನೆಂಬವನ ಕೊಂದು
ಸಾಮಕವೇದವ ತಂದನು ಮಾ 1
ಗುಡ್ಡವು ಮುಳುಗಿ ಪೋಗಲು ನಮ್ಮದೇವ
ಗುಡ್ಡವ ಬೆನ್ನಲ್ಲಿಟ್ಟನು ಮಾ
ಗುಡ್ಡದಂಥÀ ದೈತ್ಯರನೆಲ್ಲ
ಅಡ್ಡÀಕೆಡಹಿ ಬಿಸುಟನು ಮಾ 2
ಚಿನ್ನಗಣ್ಣಿನವನು ಬಂದು
ಕನ್ನೆ ಪೆಣ್ಣನೊಯ್ಯಲು ಮಾ
ವರ್ಣರೂಪವ ತಾಳಿ ಅವನ
ಭಿನ್ನ ಭಿನ್ನವ ಮಾಡಿದನು ಮಾ 3
ಕಂಭದಿಂದಲೆ ಉದಿಸಿ ನಮ್ಮ ದೇವ
ಜಂಭದಸುರನ ಬಡಿದನು ಮಾ
ನಂಬಿದ ಪ್ರಹ್ಲಾದನ್ನ ಕಾಯಿದ
ಅಂಬುಜನಾಭ ನರಸಿಂಗನು ಮಾ 4
ಬಲು ಮುರುಡನಾಗಿ ಭೂಮಿಯ
ಬಲಿಯ ದಾನವ ಬೇಡಿದ ಮಾ
ಇಳೆಯ ಈರಡಿಯ ಮಾಡಿ
ಬಲಿಯ ಪಾತಾಳಕೊತ್ತಿದ ಮಾ 5
ಕೊಡಲಿಯನ್ನು ಪಿಡಿದು ನಮ್ಮದೇವ
ಕಡಿದ ಕ್ಷತ್ರಿಯ ರಾಯರ ಮಾ
ಹಡೆದ ತಾಯ ಶಿರವ ತರಿದು
ಪಡೆದನಾಕೆÉಯ ಪ್ರಾಣವ ಮಾ 6
ಎಂಟೆರಡು ತಲೆಯ ಅಸುರನ
ಕಂಠವ ಛೇದಿಸಿ ಬಿಟ್ಟನು ಮಾ
ಒಂಟಿರೂಪವ ತಾಳಿ ಲಂಕೆಯ
ಬಂಟ ವಿಭೀಷಣಗಿತ್ತನು ಮಾ 7
ಸೋಳಸಾಸಿರ ಗೋಪಿಯರೊಡನೆ
ಕೇಳೀಮೇಳದಲಿಪ್ಪನು ಮಾ
ಬಾಲಕನಾಗಿ ಪೆಣ್ಣರೂಪದಲಿ ಶ್ರೀ-
ಲೋಲ ಲಕ್ಷ್ಮಿಯ ಅರಸನು ಮಾ 8
ಒಪ್ಪದಿಂದಲಿ ಬಂದು ನಮ್ಮ ದೇವ
ಇಪ್ಪೆವನದೊಳಗಿಪ್ಪನು ಮಾ
ಸರ್ಪಶರನಾಗಿ ಪೋಗಿ
ತ್ರಿಪುರಸಂಹರ ಮಾಡಿದ ಮಾ 9
ಎಲ್ಲಮ್ಮಾ ಎಲ್ಲಮ್ಮಾ ನಮ್ಮದೇವ
ಬಲ್ಲಿದ ಕಲ್ಕ್ಯವತಾರನು ಮಾ
ಇಳೆಯ ಸ್ವರ್ಗ ಪಾತಾಳಕೊಡೆಯ
ಚೆಲುವ ಹಯವದನನು ಮಾ 10
***
No comments:
Post a Comment