Wednesday, 1 September 2021

ಇದ್ದೀಯಾ ಶ್ರೀ ಹರಿ ನೀನೊಲಿದು ಬಂದಿದ್ದೀಯಾ ankita neleyadikeshava

 ..

ಇದ್ದೀಯಾ ಶ್ರೀ ಹರಿ ನೀನೊಲಿದು ಬಂದಿದ್ದೀಯಾ ಪ


ಇದ್ದೀಯಾ ಶ್ರೀಹರಿ ನೀನು - ವೃದ್ಧಿಸಿದ್ಧಿಯ ನಡುವೆ ಪದುಮನಾಭನು - ಅಭಿ-ವೃದ್ಧಿಯಾಗಲು ತಡವೇನು - ಅಹಬುದ್ಧಿಯಾಗಿ ಭಜಿಸುವ ಬಾಳುವೆಗೆ - ಸ-ಮೃದ್ಧಿಯಾಗಿ ಸರ್ವ ಸಿದ್ಧಿಯ ಕೊಡಲಾಗಿ 1


ನಂಬಿದ್ದ ಸುಜನರು ಹರಿಯೆ - ಕೆಟ್ಟದೆಂಬ ಸುದ್ದಿಯ ನಾನರಿಯೆ - ಸತ್ಕು-ಟುಂಬ ಎಂಬುದು ಹೊಸಪರಿಯೆ - ಅಹಬೆಂಬಲವಾಗಿ ಸಜ್ಜನರ ಸಲಹುವ ಕೃ-ಪಾಂಬುಧಿ ಮೂಜಗಕೊಲಿಯಲೋಸುಗ ಬಂದು ಉಲಿಯೆ2


ಶೇಷಗಿರೀಶ ಮದ್ಬಂಧು - ಆದಿಕೇಶವ ಗುರುವೆ ನೀನೆಂದು - ಕೃಷ್ಣಕ್ಲೇಶ ಬಿನ್ನೈಸುವೆ ಇಂದು - ಅಹಆಸೆ ಬಿಟ್ಟು ಪೂಜಿಸುವ ಭಕ್ತರದಾಸನೆಂದು ವೆಂಕಟೇಶ ನೀನೊಲಿದು ಬಂದಿದ್ದೀಯಾ3

***


No comments:

Post a Comment