Friday, 3 September 2021

ಕರುಣವ ಬೀರು ಚೆನ್ನ ಕಾಯಬೇಕೋ ಎನ್ನಮರೆತಿರೆ ಕಾವರ ಕಾಣೆ ankita hayavadana

 ..

ಕರುಣವ ಬೀರು ಚೆನ್ನ ಕಾಯಬೇಕೋ ಎನ್ನಮರೆತಿರೆ ಕಾವರ ಕಾಣೆ ಪ.


ಸೊಪನ ಜಾಗರದಲ್ಲಿ ನಿನ್ನ ಧ್ಯಾನವೆ ಬಂದುತೃಪ್ತನಾಗಿ ನಾನು ಜೀವಿಸುವೆಕಪಟದ ನುಡಿಯಲ್ಲ ನೀನೆ ಬಲ್ಲೆವಿಪತ್ತುಗಳನೆ ಬಿಡಿಸಯ್ಯ 1


ಕಡಲಮಗಳ ಗಂಡ ಕಾಮಧೇನು ನೀ ಕಂಡ್ಯಾಬಡವ ನಿನ್ನಡಿಗೆ ಪೊಡಮಡುವೆಒಡಲ ಬಳಿಯ ನೆಳಲಂತೆ ಬಿಡದೆ ನಿನ್ನದೃಢವಾಗಿ ನಾನು ಕೂಡುವೆನು 2


ತಂಡ ತಂಡದ ವ್ಯಾಧಿಯ ಉಂಡು ಉಂಡು ಬಳಲಿದೆಕಂಡ ಕಂಡವರ ಬೇಡಿ ನೊಂದೆಹಿಂಡುಹಿಂಡುಗಟ್ಟಿ ಬಂದ ಚಂಡ ದಂಡಧರನವರುತುಂಡು ತುಂಡು ಮಾಡಿ ಕಾಡುವರು 3


ಘೋರತರ ವ್ಯಾಧಿಗಳ ತೋರಿ ತೋರಿ ನರಕದಿಮುರಹರನುಣಿಸದೆ ಬಿಡನುಮೀರಿ ಮೀರಿ ಬಹ ಮೃತ್ಯು ಆರನಂಜಿಸುವುದುಭಾರಿ ಭಾರಿ ಗಳಿಸಿದ ಪಾಪ 4


ಹರಿ ನಿನ್ನ ಚರಣದ ಸ್ಮರಣೆ ಒಂದಿರೆ ಸಾಕುಮರಣಗಿರಣಕಂಜೆನಯ್ಯಶರಣಜನರು ನಿನ್ನ ಪ್ರಾಣಕ್ಕೆ ಸರಿಯೆಂಬೆಸಿರಿರಮಣನೆ ಸಲಹೆನ್ನ 5


ಶರಧಿಯೊಳಾಡುವ ಮಂದರಧರ ವರಾಹನೆಹಿರಣ್ಯಾಕ್ಷವೈರಿ ವಾಮನನೆಪರಶುರಾಮನೆ ರಘುರಾಮ ಕೃಷ್ಣ ಬೌದ್ಧನೆಧುರದಿ ಕಲ್ಕಿಯಾಗಿ ಮೆರೆದೆ 6


ಕರಕರ ಮತತತ್ವವ ಒರದೊರೆದು ಪೇಳುವೆಥÀರಥರದ ಹಿರಿಯರನೆಲ್ಲಮಿರಿ ಮಿರಿ ಮಿಂಚುತಿಹ ಮುರಹರನ ಭಜಿಸದೆಹರಿಹರಿಯೆಂದು ಪೇಳೆನೊಮ್ಮೆ 7


ಮನೆಮನೆವಾರ್ತೆಗೆ ಧನಂಗಳ ಗಳಿಸಿದೆಚಿನಿಚಿನಿಯಂಬರಕೆ ಮರುಳಾಹೆಮನೆಮನೆ ಮಹಿಮೆಯ ಕಾಣೆ ಕಾಣೆ ಕೆರೆಗಳನೆನೆನೆನೆದಾಡುತ್ತ ನಾ ಭಜಿಸಿ 8


ತನು ಜೀರ್ಣವಾಯಿತು ಕರಣ ಎನ್ನಿಚ್ಛೆಯೊಳಿಲ್ಲಮನವೆನ್ನ ಮಾತು ಕೇಳದಯ್ಯಇನಿತು ಸಂಕಟದವ ಇನ್ನು ನಾನೆಂತರ್ಚಿಪೆವನಜನಾಭನೆ ಹಯವದನ9

***


No comments:

Post a Comment