ಕಾಖಂಡಕಿ ಶ್ರೀ ಕೃಷ್ಣದಾಸರು
ನಮಗೊಬ್ಹಾನೆ ತಾ ಜೀವಜೀವದ ಗೆಳೆಯ pa
ಸುತ್ತಿ ಸೂಸ್ಯಾಡುತ್ಹಾನೆ ನೆತ್ತಿಯೊಳಗೆ ತುಂಬ್ಯಾನೆ ತುತ್ತುಮಾಡಿ ಉಣಿಸುತ್ಹಾನೆ ಹತ್ತಿಲೆ ತಾ ಹಾನೆ 1
ಹೊಟ್ಟೆಲೆನ್ನ ಹಿಡಿದಾನೆ ಘಟ್ಯಾಗಿ ರಕ್ಷಿಸುತಾನೆ ದೃಷ್ಟಿಸಿ ನೋಡುತ್ಹಾನೆ ಗುಟ್ಟಿನೊಳ್ಹಾನೆ 2
ತಾನೆ ಸೋತು ಬರುತ್ಹಾನೆ ಎನಗುಳ್ಳ ಸದ್ಗುರು ನಾಥ್ಹಾನೆ ಕನಗರಸಿದಾಗೊಮ್ಹಾನೆ ಮನದೊಳು ನಿಂದ್ಹಾನೆ 3
ಮಾಯದ ಸುಖ ಮರಿಸ್ಯಾನೆ ತಾಯಿ ತಂದೆ ತಾನಗ್ಹ್ಯಾನೆ ಸಾಹ್ಯ ಬಲು ಮಾಡುತ್ಹಾನೆ ಭವಭಯ ಬಿಡಿಸ್ಹ್ಯಾನೆ 4
ಮನ್ನಿಸಿ ದಯ ಬೀರುತ್ಹಾನೆ ಧನ್ಯ ಪ್ರಾಣಗೈಸುತ್ಹಾನೆ ಚಿಣ್ಣ ಮಹಿಪತಿಯ ಗುರು ತಾನೆ ಕಣ್ಣಿನೊಳ್ಹಾನೆ 5
***
No comments:
Post a Comment