ಕಾಖಂಡಕಿ ಶ್ರೀ ಕೃಷ್ಣದಾಸರು
ನಿನಗ್ಯಾಕೋ ಜನರಂಜನೆ | ವಣಾ ಭಂಜನೆ ಪ
ಎಲ್ಲವಿದ್ಯವ ಸಾಧಿಸಿ ಮೆರೆಯಬೇಕೆಂಬ | ಬಲ್ಲವಿಕೆ ಹೆಮ್ಮೆಗೆ ಬೀಳುರೆ | ಯಳ್ಳಿಗೆ ಬೆಲ್ಲವ ಹುಯಲು ಹೋದಂತವಯ | ಸುಳ್ಳಿನ ಭ್ರಾಂತಿ ಕಳುವರೇ 1
ಹೆಣಗುತಿ ದೀಕ್ಷಿತನೆಂಬ ಮನ್ನಣಿಗ್ಯಾಗಿ | ದಣಿವರೆ ಕರ್ಮದಿ ದಣ್ಣನೆ | ಮುಣುಗುವವನ ತೆಲಿಮ್ಯಾಲ ಕಲ್ಲನ್ನಿಟ್ಟರೆ | ಗಣಿಸದೇ ದಾಟಲು ಬಲ್ಲನೆ 2
ಶರಣ ಕೊಳಬೇಕೆಂದು ಬೂದಿ ರುದ್ರಾಕ್ಷಿಯ | ಧರಿಸಿ ಕಾವಿಯ ಸೋಗು ಮಾಡುವರೆ | ಹರುಷದಿ ಖಜ್ಜಿಗೆ ಬಿಸಿನೀರು ಹೊಯ್ದಂತೆ | ಮರುಳೆ ಜನ್ಮ ಸಾಧನ ಕೂಡುರೇ 3
ಕಾಲನುಕೂಲವಿದ್ದ ಕೈಯಲಿ ಪರಗತಿ | ಕೀಲವರಿತು ಜ್ಞಾನ ಪಡೆವುದ | ಕೊಳ್ಳೆ ಹೋದ ಬಳಿಕ ಕೂಗುವ ಪರಿಯಲಿ | ಚಾಲವರಿದರಾಗ ಬಾರದು 4
ಒಂದೇ ನಿಷ್ಠೆ ಒಂದೇ ಮಾರ್ಗದಿ ಮನ | ದಂದುಗ ಬಿಟ್ಟು ಶರಣ ಹೊಕ್ಕರೆ | ತಂದೆ ಮಹಿಪತಿ ಸುತ ಪ್ರಭು ಬೀರುವ | ಮಂದನಾಗದೇ ತಿಳಿ ಇನ್ನಾದರೆ 5
****
No comments:
Post a Comment