ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮ ಸಲಹಯ್ಯ ಪುಣ್ಯನಾಮ ಶ್ರೀ ರಾಘವೇಂದ್ರ
ಪೂರಿತಕಾಮ ನೇಮ ಶ್ಯಾಮ ಪರಮಗುಣ ರತ್ನಧಾಮ ll ಧ್ರುವ ll
ವನಜಾಂತಕ ಕುಂದರದನ ಅನುಪಮ ಸುಂದರವದನ
ರಣದಲಿ ಜಿತದಶವದನ ಅನಂತ ಮದನಲಾವಣ್ಯ ಸದನ ll 1 ll
ಕರುಣ ಶರಣ ಭರಣ ಭರಣ ಧರಣೋದ್ಧಾರಣ
ಸ್ಫುರಣ ಕಿರಣದೊರಣ ಚರಣ ಅರುಣಾಂಬುಜಾಲಯರಮಣ ll 2 ll
ವೀರಗುಣಗಂಭೀರ ಕ್ರೂರಾಸುರ ಸಂಹಾರ
ಶೂರ ಜನ್ಮವಿದೂರ ಮಹಿಪತಿ ಧೀರ ಕೃಷ್ಣೊಡಿಯ ಉದಾರ ll 3 ll
***
ರಾಮ ಸಲಹಯ್ಯ ಪುಣ್ಯನಾಮ | ಶ್ರೀ ರಾಘವೇಂದ್ರಾ ಪೂರಿತಕಾಮಾ ನೇಮಾ | ಶಾಮ ಪರಮಾ ಗುಣರತ್ನ ಧಾಮಾ ಪ
ವನಜಾಂಬಕ ಕುಂದರದನಾ | ಅನುಪಮ ಸುಂದರ ವದನಾ | ರಣದಲಿ ಜಿತ ದಶವದನಾ | ಅನಂತವದನಾ ಲಾವಣ್ಯ ಸದನಾ 1
ಕರುಣಾ ಶರಣಾ ಭರಣಾ | ಧರಣಿ ಧರಣೋದ್ಧರಣಾ | ಸ್ಪುರಣ ಕಿರಣ ದೋರಣ ಚರಣಾ | ಅರುಣಾಂಬುಜಾಲಯ ರಮಣಾ 2
ವೀರಾಗುಣ ಗಂಭೀರಾ | ಕ್ರೂರಾಸುರ ಸಂಹಾರಾ | ಶೂರಾ ಜನ್ಮ ವಿದೂರಾ | ಮಹಿಪತಿ ಧೀರಾ ಕೃಷ್ಣನೊಡೆಯ ಉದಾರಾ 3
***
ರಾಮ ಸಲಹಯ್ಯ ಪುಣ್ಯನಾಮ ಶ್ರೀ ರಾಘವೇಂದ್ರ ಪೂರಿತಕಾಮ ನೇಮ ಶ್ಯಾಮ ಪರಮಗುಣ ರತ್ನಧಾಮ ಪ
ವನಜಾಂತಕ ಕುಂದರದನ ಅನುಪಮ ಸುಂದರವದನ ಸದನ 1
ಕರುಣ ಶರಣ ಭರಣ ಭರಣ ಧರಣೋದ್ಧಾರಣ ಸ್ಪುರಣ ಕಿರಣದೊರಣ ಚರಣ ಅರುಣಾಂಬುಜಾಲಯರಮಣ 2
ವೀರಗುಣಗಂಭೀರ ಕ್ರೂರಾಸುರ ಸಂಹಾರ ಶೂರ ಜನ್ಮವಿದೂರ ಮಹಿಪತಿ ಧೀರ ಕೃಷ್ಣೊಡಿಯ ಉದಾರ 3
No comments:
Post a Comment