ಕಾಖಂಡಕಿ ಶ್ರೀ ಕೃಷ್ಣದಾಸರು
--------------
--------------
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏಳೈಯ್ಯಾ ಆತ್ಮರಾಮಾ | ಯತಿ ಮುನಿಜನ ಪ್ರೇಮಾ | ಏಳೆಯ್ಯ ಘನಶಾಮಾ | ಎನ್ನಪಾಲಿಸೈ ಗುಣಧಾಮಾ ಪ
ಬೋಧ ಸುರ್ಯನು ಬರಲಿ | ಮರವಿನ ಕತ್ತಲೆ ತೆರಳಿ | ಬೆಳಗಾಯಿತು ಮನದಲ್ಲಿ 1
ವಾದತಾರೆಗಳಡಗಿ | ವಿಕಸಿತ ಹೃತ್ಕಮಲಾಗಿ | ಸಾಧನ ಪಕ್ಷಿಗಳೊದಗಿ | ಕಲಕಲಿಸುತಿವೇ ಬಹುವಾಗಿ 2
ವಿವೇಕಾದ ಭರತಾ || ವೈರಾಗ್ಯ ಶತೃಘ್ನ ತಾ | ಸಾವಧ ಲಕ್ಷ್ಮಣ ನಿರುತಾ ಪದಸೇವೆಗೆ ನಿಂತರು ತ್ವರಿತಾ 3
ಶಮದಮವೇ ನಿಸ್ಸೀಮಾ | ವಿಭೀಷಣ ಸುಗ್ರೀವ ನೇಮಾ | ಜಾಂಬವ ಹನುಮಾ4
ಶಾಂತಿ ಸೀತೆಯು ವಲಿದು ನಿಂತಿಹಳೈ ಕೈಮುಗಿದು | ಚಿಂತಿತಾರ್ಥವನೇ ಕೊಡು | ಮಹಿಪತಿ ಸುತಗೊಲಿದು 5
***
No comments:
Post a Comment