ಕಾಖಂಡಕಿ ಶ್ರೀ ಕೃಷ್ಣದಾಸರು
ಏನಯ್ಯ ವಾರಿಜನಯನಾ | ಎನ್ನನುದ್ದರಿಸಲಾರೆಯಾ | ದೀನಾನಾಥ ದಯಾಂಬುಧಿಯಂಬಾ | ಶ್ರೀನಾಮದ ಬಿರುದಿನ ಮಹಾಮಹಿಮನಾ ಪ
ಪಾತಕ | ತಾ ಮೊದಲಿಗೆ ಇಲ್ಲವೋ ಎನುತಾ | ಆ ಮಹಾಶೃತಿ ಸಾರುತಲಿರೆ ದುಷ್ಕ್ರತ | ನಾ ಮಾಡಿದ ಘನವಾಯಿತೇ ದೇವಾ1
ಗಜಗಣಿಕಾ ಅಜಮಿಳನಹಲ್ಯಾ | ವೃಜಗೋವಳ ವ್ಯಾಧರ ಮೊದಲು | ಭಜನಿಯಿರಲಿ ಇರದಿರಲಿ ಸನಾತನ | ನಿಜಪದದೋರಿದ ಪರಮ ಉದಾರಾ2
ನೀನೇ ಗತಿ ಎಂದಾನತೆ ನಾದೆ | ಇನ್ನೇನು ನೋಡುವಿ ಅಂತವಾ | ನ್ಯೊನವಾರಿಸದೆವೆ ತಾರಿಸು ಪಾಮರ | ವಣನವನನು ಗುರು ಮಹಿಪತಿ ಸ್ವಾಮಿ 3
***
No comments:
Post a Comment