ಕಾಖಂಡಕಿ ಶ್ರೀ ಕೃಷ್ಣದಾಸರು
ದಾರಿ ದೋರೆನಗ ಮುಕುಂದಾ ಪ
ದಾರಿ ತೋರೆನಗೆ ಶ್ರೀ ಹರಿ ನಿನ್ನ ಭಕುತಿಯಾ| ಸಾರಿದೆ ನಿನ್ನವನಾನು ಮುಕುಂದಾ ಅ.ಪ
ಜನುಮಾನುಜನುಮದಲಿ|ನಾಮವಾ| ನೆನೆಯದ ತಪ್ಪಿನಲಿ|| ಜ್ಞಾನದೃಷ್ಟಿಯಲಂಧನಾದೆನು ಹರಿ ನಿಮ್ಮ| ಕಾಣದ ಕಂಗಳನಾ ಮುಕುಂದಾ1
ಭ್ರಾಂತತನವ ಬಿಡಿಸಿ|ವಿವೇಕ| ಶಾಂತಿಯ ನೆಲೆಗೊಳಿಸಿ| ಅಂತರಂಗದ ನಿಜ ಸುಖವ ಸೂರ್ಯಾಡುವ| ಸಂತರೊಳಗ ಕೂಡಿಸೋ ಮುಕುಂದಾ2
ಅರಹುನಯನ ದೆರಿಸಿ|ನಿಜರೂಪ| ಗುರುತದ ನೆಲೆ ತೋರಿಸೀ| ಗುರುವರ ಮಹಿಪತಿ ನಂದನ ಪ್ರಭು ನಂದನ ಪ್ರಭು ನಿಮ್ಮ| ಸ್ಮರಣೆ ಪಡೆಯ ನಡಿಸೋ ಮುಕುಂದಾ3
****
No comments:
Post a Comment