Wednesday, 1 September 2021

ನಿನ್ನ ನಾನೇನೆಂದೆ ನಿರ್ಮಲ ರೂಪನೆ ಪನ್ನಗ ಭೂಷಣ ಪರಮ ಸದಾಶಿವ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನಿನ್ನ ನಾನೇನೆಂದೆ ನಿರ್ಮಲ ರೂಪನೆ | ಪನ್ನಗ ಭೂಷಣ ಪರಮ ಸದಾಶಿವ ಪ 


ಸುರರು ಮೊರೆಯಿಡೆ ವಿಷವ ಧರಿಸಿ ಜಗ | ಉರಿಯಹದೆನುತ ಕಂಠದಿರಿಸಿದನು || ದುರಳ ದೈತ್ಯನ ಕೊಲ್ಲಲಾಗಿ ಅರ್ಧಾಂಗವ | ಹರಿಗೆ ನೀಡಿದ ದೇವ ಶರಣೆಂದೆನಲ್ಲದೇ || ಉರಗಣ್ಣಿನವನೆಂದೇನೇ | ಪರಹೆಣ್ಣವ | ಶಿರದೊಳಿಟ್ಟವನೆಂದೆನೇ | ಜಗದೊಳು || ಅರೆ ಮೈಯ್ಯವನೆಂದೆನೇ | ನಿಜಪದ | ಶರಣರಿಷ್ಟಾರ್ಥವ ನೀವನೇ ಬಾಯಂದೆ 1 

ಸದ್ಗತಿ ನೀಡಿದ ಬ್ಯಾಡಗ ಮರ ದೊಪ್ಪ | ಲುದುರಿಸವಗ ನಿಜವ ದೋರಿದ || ಮುದದಿಂದ ಪಾಶುಪತವಾನಿತ್ತ | ಸದಮಲಾ ನಂದನೇ ಶರಣೆಂದೇ ಕಾಲಿಲಿಂ || ದ್ವೋದಿಸಿ ಕೋಂಡವನೆಂದೆನೇ | ಬಾಯಿಂದುಗು | ಳಿದರೆ ತಾಳ್ದದವನೆಂದೆನೇ | ನರಕಾಳ || ಗದಿ ಸೋತವನೆಂದೆನೇ | ವರಮುನಿ | ತ್ರದಶಾಧಿಪತಿ ಮುಖ್ಯ ಸೇವಿತ ಬಾಯಂದೆ 2 

ಸರಸಿಜ ಭವನ ತಲೆಯ ನೊಂದು ಶಳದುಸಾ | ವಿರಭುಜ ನೀಡಿದ ಬಲಿಸುತಗ || ಸಿರಿಯೊಳನ ಕುಟುಂಬಕ್ಕೆ ಕೈವಲ್ಯವ | ಕರುಣಿಸಿದರಸನೆ ಬಾಯಂದೆ ಕಪಾಲ || ಕರದಿ ಪಡಿದವನೆಂದೆನೇ | ನರಮಾಂಸಕ | ಹರಿದು ಪೋದವನೆಂದೆನೇ | ಬಾಗಿಲಕಾವಾ || ಸುರನ ಬಂಟನೆಂದೆನೇ | ಸಲಹುವಾ | ಗುರು ಮಹಿಪತಿ ಪ್ರಭು ನಮೋ ನಮೋ ನಿನಗೆಂದೇ 3

****


No comments:

Post a Comment