..
kruti by ವೀರನಾರಾಯಣ Veeranarayana
ಎಂಥ ಪಾಪವನು ಮಾಡಿರುವೆನೋ ಶ್ರೀಹರಿಯೇ
ಇಂಥ ದುರ್ದೆಸೆಗೆನ್ನ ಎಳೆತಂದು ಬಿಡಲಿಕ್ಕೆ ಪ
ಉದಯ ಕಾಲದೊಳೆದ್ದು ಉದರ ಪೋಷಣೆಗಾಗಿಹದವನರಿಯದೆ ಬಳಲಿ ಅಂತಿಂತು ಬಡೆದಾಡಿಬದುಕು ತಂದೊಡಲ ಹೊರಕೊಂಡು ಸಲೆನನ್ನಪದವ ನೆನೆಯಲು ಸ್ವಲ್ಪ ಸಹ ವೇಳೆ ಸಿಗದಂತೆ 1
ಹಿಡಿದ ಕಾರ್ಯಗಳೆಲ್ಲ ಬಿಡದೆ ನಿಷ್ಫಲವಾಗಿಒಡವೆ ಇಲ್ಲದ ಬರಿಯ ಒಡೆತನಕೆ ಅಣಿಮಾಡಿಮಡದಿ ಮಕ್ಕಳ ಬಿರುಸು ನುಡಿಗೇಳಿ ಮನನೊಂದುಸುಡುಬಾಳ್ವೆ ಇದನೆಂದು ಮುಡುಕುವಂದದು ಗೈಸಿ 2
ನಂಬಿದವರನು ಹರಿಯು ಬೆಂಬಿಡನು ಎಂದೆಂದುಎಂಬ ಬಿರುದನು ತೊರೆದು ಇಂಬುಗೊಡದಿರಲಿಕ್ಕೆಅಂಬುಜಾಕ್ಷನೆ ನಿನಗೆ ಸಂಬಂಧವಿರದೇನುಹಂಬಲಿಪ ದುಃಸ್ಥಿತಿಗೆ ತುಂಬ ತಂದಿಡಲಿಕ್ಕೆ 3
ಅಣುಗರಿಗೆ ಉಣಿಸಲಿಕೆ ಹಣವೆತ್ತ ಗಳಿಸಲಿಫಣಿಶಯನ ನಿನಗಿನ್ನು ಗುಣವೆತ್ತ ತೋರಿಸಲಿಮಣಿಗಳನು ಎಣಿಸುತ್ತ ಪ್ರಣವೆತ್ತ ಧೇನಿಸಲಿಹಣಿವ ಭವದೊಳು ಸಿಲುಕಿ ಕ್ಷಣವು ಸಹ ಸಿಗದಾಯ್ತು 4
ಬಾಳಿನೊಳು ಸೌಖ್ಯವೇ ಆಳವೈಶ್ವರ್ಯವೆತೋಳಿನೊಳು ದಾಢ್ರ್ಯವೆ ಚಿತ್ತದೊಳು ಸ್ಥೈರ್ಯವೆಹೇಳು ಗದುಗಿನ ವೀರನಾರಾಯಣನೆ ಮಣಿವೆ 5
***
No comments:
Post a Comment