..
ರಾಗ - : ತಾಳ -
ಸಾರಿದವರನು ಹೊರೆವ ಧೀರನಿವನಾರೆ
ನೀರೆ ನಂಬು ಹಯವದನನುದಾರ ಶ್ರೀಮಂತೂರ ಹರಿಯ ll ಪ ll
ಲೆಕ್ಕವಿಲ್ಲದೆ ನಿಗಮವರಸಿ
ದಿಕ್ಕುಕಾಣದೆ ಧಾವತಿಗೊಳಲಿ
ಸೊಕ್ಕಿದ ವ್ರಜ ವಧುಗಳಲ್ಲಿ
ವಾಕ್ಯಕೆ ತನ್ನ ನಿಜವ ತೋರನೆ ll ೧ ll
ಅಸುರ ಭಟರ ನಿಶಿತ ಶರಕೆ
ಪೆಸರುಗೊಳ್ಳದ ಗೋಪಸತಿಯರ
ಶಶಿಮುಖಿಯರ ನಖದ ಕೊನೆಗೆ
ವಶವ ಮಾಡನೆ ರಸಿಕರರಸ ll ೨ ll
ಮಲ್ಲರ ಬಲುಭುಜದ ಕುಶಲ
ದಲ್ಲಿ ಸಿಲುಕದದ್ಭುತಮಹಿಮ
ಚೆಲ್ವ ಗೋಪಿಯರಪ್ಪಲು ಕರ
ಪಲ್ಲವದೊಳಾದುದಿಲ್ಲವೆ ll ೩ ll
***
ಸಾರಿದವರನು ಹೊÉರೆವ ಧೀರನಿವನಾgನೀರೆ ನಂಬು ಹಯವದನನುದಾರ ಶ್ರೀಮಂತೂರ ಹರಿಯ ಪ.
ಲೆಕ್ಕವಿಲ್ಲದೆ ನಿಗಮವರಸಿದಿಕ್ಕುಕಾಣದೆ ಧಾವತಿಗೊಳಲುಸೊಕ್ಕಿದ ವಜ್ರ ವಧುಗಳಲ್ಲಿವಾಕ್ಯಕೆ ತನ್ನ ನಿಜವ ತೋರನೆ1
ಅಸುರ ಭಟರ ನಿಶಿತ ಶರಕೆಪೆಸರುಗೊಳ್ಳದ ಗೋಪಸತಿಯರಶಶಿಮುಖಿಯರ ನಖದ ಕೊನೆಗೆವಶವ ಮಾಡನೆ ರಸಿಕರರಸ 2
ಮಲ್ಲರ ಬಲುಭುಜದ ಕುಶಲದಲ್ಲಿ ಸಿಲುಕದದ್ಭುತಮಹಿಮಚೆಲ್ವ ಗೋಪಿಯರಪ್ಪಲು ಕರ-ಪಲ್ಲವದೊಳಾದುದಿಲ್ಲವೆ 3
***
No comments:
Post a Comment