ತಿಂಗಾಳು ಮುಳುಗಿದವೊ ರಂಗೋಲೆ ಬೆಳಗಿದವೊ
ತಾಯಿ ಚಾಮುಂಡಿಯ ಪೂಜೆಗೆಂದು
ಬಾಳೆ ಬಾಗಿದವೊ
ನಮ್ಮ ತಾಯಿ ಚಾಮುಂಡಿಯ ಪೂಜೆಗೆಂದು
ಬಾಳೆ ಬಾಗಿದವೊ llಪll
ಮಾಯ್ಕಾತಿ ಚಾಮುಂಡೀ
ಮಂಡೆಲ್ಲಿ ಒದರೀರಿ
ಮೈಸೂರಿಂದಾಚೆ ಬೆಟ್ಟದಲ್ಲಿ
ಬಾಳೆ ಬಾಗಿದವೋ ll1ll
ಕರಿಯ ಕಡ್ಡಿಯ ಸೀರೆ
ನರಿಗೆ ಚಿನ್ನದ ಕುಣಿಕೆ
ನಡೆಮುಡಿಯ ಮ್ಯಾಲೆ ಬರುವವಳೆ
ಬಾಳೆ ಬಾಗಿದವೋ ll2ll
ಕಣ್ಣ ಕನ್ನಡಿ ಬಂದೊ
ಕಂಚಿನ ಹೆಬ್ಬರೆ ಬಂದೊ
ಸಣ್ಣೇರಿಮ್ಯಾಲೆ ಮಾಡೇ ಬಂದೋ
ಬಾಳೆ ಬಾಗಿದವೋ ll3ll
***
Thingalu Mulugidavo Rangole Belagidavo
Thaayi Chamundiya Pojegendu
Baale Baagidavu
Namma Thaayi Chamundiya Pojegendu
Baale Baagidavu llPll
Maaikaarthi Chamundi
Mandelli Odareeri
Mysurindaache bettadalli
Baale Baagidavo ll1ll
Kariya Kaddi Seere
Narige Chinnada Kunike
Nademudiya Myaale Baruvavale
Baale Baagidavo ll2ll
Kanna Kannadi Bando
Kanchina Hebbare Bando
Sanneri Myaale Made Bando
Baale Baagidavo ll3ll
***
ತಿಂಗಳು ಮುಳುಗಿದವೋ ರಂಗೋಲಿ ಬೇಳಗಿದವೋ
TINGALU MULUGIDAVO RANGOLI BELAGIDAVO
No comments:
Post a Comment