Wednesday, 11 August 2021

ಅಂದೆ ನಿರ್ಣಯವಾದುದಕೆ ಸಿರಿ ಇಂದಿರಾಪತಿ purandara vittala

ರಾಗ ಸೌರಾಷ್ಟ್ರ ಆದಿ ತಾಳ

ಅಂದೆ ನಿರ್ಣಯವಾದುದಕೆ, ಸಿರಿ
ಇಂದಿರಾಪತಿ ಪರ ದೇವತೆಯೆಂದು ||ಪ||

ಅಂದು ಸ್ವಯಂವರದಲ್ಲಿ ಬ್ರಹ್ಮರುದ್ರಾದಿ
ಇಂದ್ರಾದಿಗಳೆಲ್ಲರ ಜರೆದು
ಇಂದಿರೆ ನಿತ್ಯಾನಂದ ನಿರ್ದೋಷ ಗುಣ ಪೂರ್ಣ-
ನೆಂದು ಮಾಲೆಯ ತಾ ಹಾಕಿದಳು ||

ಸರಸಿಜೋದ್ಭವ ಹರಿಪಾದವ ತೊಳೆಯಲು
ಹರ ಭಕ್ತಿಯಿಂದ ಹರಿಪಾದ ತೀರ್ಥವ
ಹರುಷದಿ ಸುರಮುನಿಗಳೆಲ್ಲರ ಮುಂದೆ
ಧರಿಸಿದನೆಂದು ಶಿರಸಿನಲ್ಲಿ ||

ವೃಕನೆಂಬಾಸುರಗೆ ಹರ ವರವನೆ ಕೊಟ್ಟು
ಚಕಿತನಾಗಿ ಓಡಿ ಬಳಲುತ್ತಿರೆ
ರುಕುಮಿಣಿಪತಿ ವೃಕಾಸುರನ ಭಸ್ಮವ ಮಾಡಿ
ಭಕುತ ರುದ್ರನೆಂದು ಪಾಲಿಸಿದ ||

ಕರಿಯಾದಿಮೂಲಗೆ ಮೊರೆಯಿಡಲದ ಕೇಳಿ
ಸುರರು ತಾವೊಲ್ಲೆವೆಂದು ಸುಮ್ಮನಿರಲು
ಗರುಡನ ಪೆಗಲೇರಿ ಹರಿ ಬೇಗದಿ ಬಂದು
ಕರಿರಾಜನನಂದು ತಾ ರಕ್ಷಿಸಿದ ||

ಹರಿಹರವಿರಿಂಚರ ಲೋಕಗಳಿಗೆ ಪೋಗಿ
ಹರಿಹರವಿರಿಂಚರ ಪರಿಗಳನು
ಹರುಷದಿ ಭೃಗುಮುನಿ ತಿಳಿದು ಬೇಗದಿ ಬಂದು
ಸರಸ್ವತೀ ತೀರದ ಋಷಿಗಳಿಗೊರೆದ ||

ನಾಮತ್ರಯ ಪ್ರಭಾವದಿಂದಲಿ ಬೇಗ
ಸೋಮಧರನು ವಿಷವನೆ ಧರಿಸಿ
ರಾಮ ನಾಮವೆಂಬ ಅಮೃತಪಾನದಿಂ
ಕಾಮಾರಿ ತಾ ಮೃತ್ಯುಂಜಯನಾದ ||

ಸಂದೇಹಾತ್ಮಾ ವಿನಶ್ಯತಿಯೆಂಬ ಶ್ರುತಿ
ವೃಂದಗಳೆಲ್ಲವು ಸಾರುತಿರೆ ಪು-
ರಂದರ ವಿಠಲ ಸರ್ವೋತ್ತಮನೆಂಬಲ್ಲಿ
ಸಂದೇಹವ ಬಿಟ್ಟು ಸುಖಿಸೆಲೋ ಜೀವ ||
***

pallavi

ande nirNayavADudidake siri indirApati para dEvateyendu

caraNam 1

andu svayamvaradalli brahma rudrAdi indrAdigaLellara jaredu
indire nityAnanda nirdOS guNa pUrNanendu mAleya tA hAkidaLu

caraNam 2

sarasijOdbhava paripAdava toLeyalu hara bhaktiyinda haripADa tIrttava
haruSadi suramunigaLellara munde dharisidanendu shirasinalli

caraNam 3

vrkanemba asurage hara varavane koTTu sakitanAgi Odi baLaluttire
rukumiNIpati vrkAsurana bhasmava mADi bhakuta rudranendu pAlisida

caraNam 4

kariyAdi mUlage moreyiDalada kELi suraru tvollevendu summaniralu
garuDana pegalEri hari bEkadi bandu karirAjananandu tA rakSisida

caraNam 5

harihara virincara lOkagaLige pOgi harihara virincara parigaLanu
haruSadi bhrugumuni tiLidu bEgadi bandu sarasvatI tIrada rSigaLigorede

caraNam 6

nAmatraya prabhAvadindali bEga sOmadharanu viSavane darisi
rAma nAmavemba amrta pAnadim kAmAri tA mrtynjayanAda

caraNam 7

sandEhAtmA vinashyatiyemba shruti vrndagaLellavu sArutire
purandara vITTala sarvOttamanemballi sandEhava biTTu sukhiselO jIva
***

No comments:

Post a Comment