Wednesday, 25 August 2021

ನಿಲ್ಲೋ ವಿಟ್ಠಲ ಸರಿಯಲ್ಲಾ ನಿನ್ನವರವ ankita venkatesha vittala

 

ನಿಲ್ಲೋ ವಿಟ್ಠಲ ಸರಿ l ಯಲ್ಲಾ ನಿನ್ನವರವ l ರಲ್ಲೀ ಈ ಬಿಗುಮಾನವೇ ll ಪ ll


ವಲ್ಲಭನೆಂದಮಿ l ತೋಲ್ಲಾಸದಲಿ ಬರೆ l ಸೊಲ್ಲು ಲಾಲಿಸದೆ ಮ l ತ್ತೆಲ್ಲಿಗೆ ಸರಿಯುವೆ ll ಅ ಪ ll


ಅಚ್ಯುತಾರ್ಪಿತವೆಂದು l ದಾಸರೆನಲು ಕಲ l ಗಚ್ಚು ಕುಡಿಯಲಿಲ್ಲವೇ ll

ಮುಚ್ಚಟೆ ಇಲ್ಲದೆ l ಮೆಚ್ಚಿ ಶಬರಿಯಳ  l ಉಚ್ಚಿಷ್ಟ ಉಣಲಿಲ್ಲವೇ ll

ಮಚ್ಛಾದ್ಯವತಾರದಿ l ಸಚ್ಚೇತನರ ಭವ್ಯ l ಇಚ್ಛೆ ಸಲಿಸಲಿಲ್ಲವೇ ll

ಕಚ್ಚೀ ಬೈದೊದ್ದವರಿ l ಗ್ಹೆಚ್ಚಿನ ಫಲವಿತ್ತ l ಹುಚ್ಚುದೊರೆಯೆ ಎನ್ನ l ತುಚ್ಛೀಕರಿಸೆ ಬಿಡೆ ll 1 ll


ಕುಂಡ ಗೋಳಕರಲ್ಲಿ l ಗಂಡಾಳಾಗಿದ್ದು ನರನ l ಬಂಡೀ ಹೊಡೆಯಲಿಲ್ಲವೇ ll

ಹೊಂಡಾದಾನೆಯ ದುಃಖ l ಖಂಡಿಸಬೇಕೆಂದು l ಕೊಂಡೋಡಿ ಬರಲಿಲ್ಲವೇ ll

ಕಂಡು ಪಾಕದ ಶೇಷ l ಉಂಡಾಪ್ತಮಿತ್ರರ l ಗಂಡ ಹರಿಸಲಿಲ್ಲವೇ ll

ಹಿಂಡುವೈಷ್ಣವಪಾದ l ಪುಂಡರೀಕಾಳಿಯ l ಕಂಡೂ ಕಾಣದ ಹಾಗೆ l ಭಂಡೂ ಮಾಡಲು ಬಿಡೆ ll 2 ll


ಬಲಿಯ ಬಾಗಿಲ ಕಾಯ್ದು l ಶಿಲೆಯ ಸತಿಯಳ ಮಾಡಿ l ಒಲಿದಂಬರೀಷನ ಸಲಹಿಲ್ಲವೇ ll

ಹಲಿ ಛಲಿದೂರ್ವಾಸ l ಕಲಿಭೀಷ್ಮ ದ್ರೋಣರಿ l ಗೊಲಿದು ಪೊರೆದವನಲ್ಲವೇ ll

ಇಳೆಯೊಳು ಭಕ್ತರ l ಕುಲಕೋಟಿಗೊಲವಿನಿಂ l ಫಲವಾ ನೀಡುತಲಿಲ್ಲವೇ ll

ಹಲವಾಡಲೇಕೆ ತಂದೆ l ವೆಂಕಟೇಶವಿಟ್ಠಲ l ಒಲಿದವರಂತೆನ್ನ l ಸಲಹದಿದ್ದರೆ ಬಿಡೆ ll 3 ll

***


No comments:

Post a Comment