Friday, 6 August 2021

ನಿನ್ನ ನೆನಹುದೊರಕಲೆಮಗೆ ನಿತ್ಯ ಮಂಗಳಂ ಪ್ರಸನ್ನ ವಾಸುದೇವ ankita vasudevarya

 ..

Kruti by ವೆಂಕಟದಾಸರು Venkatadasaru 


ನಿನ್ನ ನೆನಹುದೊರಕಲೆಮಗೆ ನಿತ್ಯ ಮಂಗಳಂ ಪ್ರಸನ್ನ ವಾಸುದೇವಗುರುವೆ ಪರಮಮಂಗಳಂ ಗುರುವೆ ಪ


ಅನಾಥನಾದವನಿಗಾನಂದ ಮಂಗಳಂ ನಿನ್ನಧ್ಯಾನಗೈವ ಧನ್ಯರಿಗೆ ದಿವ್ಯ ಮಂಗಳಂಮಾನಸ ನಿನ್ನೊಳಗೆರಗೆ ಬಹು ಮಂಗಳಂ ಸರ್ವವೂ ನೀವೆಂದರಿತ ಮ'ಮರಿಗಖಿಲ ಮಂಗಳಂ 1


ಕಂಗಳು ನಿನ್ನೊಳಿದ್ದರೆ ಶುಭಕಾರ ಮಂಗಳಂ ಭವಭಂಗಗೈವ ನಿನ್ನ ನೋಡೆ ಭವ್ಯ ಮಂಗಳಂಅಂಗಪ್ರತಿಸೇವೆಯೆ ಸರ್ವಾದಿ ಮಂಗಳಂ ಕಷ್ಟ'ಂಗುವಂಥ ನಿನ್ನ ಕೃಪೆ ಕೋಟಿ ಮಂಗಳಂ 2


ಪಾದುಕೆಯೂಳಿಗವೇ ಪ'ತ್ರ ಮಂಗಳಂ ನಿನ್ನಪಾದಪದ್ಮ ಸೇವೆ ದೊರಕೆ ಬಹು ಮಂಗಳಂಓದಿದರೆ ನಿನ್ನ ಕಥೆಯ 'ಶ್ವ ಮಂಗಳಂ ನೀನಾದರಿಸಿ ಕರೆಯಲೆಮಗತ್ಯಂತ ಮಂಗಳಂ 3


ನಿನ್ನ ಮುಂದೆ ಕುಣಿಯಲೆಮಗೆ ನಾನಾ ಮಂಗಳಂ ಗುಣವನ್ನು ಪಾಡಿ ಪೊಗಳಿದರಪಾರ ಮಂಗಳಂನಿನ್ನ ಚರಣತೀರ್ಥಪಾನ ಅನಂತ ಮಂಗಳಂನಿನ್ನ ದಿವ್ಯಪ್ರಸಾದವೆ ಭುವನ ಮಂಗಳಂ 4


ದಾಸಾನುದಾಸನಪ್ಪುದೆ ದೊಡ್ಡ ಮಂಗಳಂ ಗುರುವಾಸುದೇವಾರ್ಯ ನಿನ್ನವರಿಗೆಲ್ಲಾ ಮಂಗಳಂಪೋಷಕನೀನಾದುದರಿಂ ಪಂತು ಮಂಗಳಂ ತ್ರಿಭುವನೇಶ ಚಿಕ್ಕನಾಗಪುರವಾಸ ಮಂಗಳಂ5

***


No comments:

Post a Comment