Friday, 6 August 2021

ತೊಲಗು ನೀ ತೊಲಗಿನ್ನು ಅಭಿಮಾನವೆಅಲೆಬಡಿಸದಿರೆನ್ನನೂ ankita vasudevarya

 ..

Kruti by ವೆಂಕಟದಾಸರು Venkatadasaru 


ತೊಲಗು ನೀ ತೊಲಗಿನ್ನು ಅಭಿಮಾನವೆಅಲೆಬಡಿಸದಿರೆನ್ನನೂ ಹಲವು ಜನರಕಾಲಕೆಳಗೆ ನಿಲ್ಲಿಸಿಯನ್ನ ಹೊಲೆಗೆಲಸವ ಮಾಡಲೆಳಸಿ ನೆಗ್ಗಿದೆಯಲ್ಲ ಪ


ಸತಿಸುತ ಪೋಷಣೆಯು ಮುಖ್ಯವು ಮಾತಾಪಿತೃಗಳಾರಾಧನೆಯು ಬಳಗ ಬಂಧು ತತಿಗಳ ಮನ್ನಣೆಯು ಕುಲ ಜಾತಿ ದೇವತೆಯ ಪೂಜಿಪ ಹಬ್ಬವು ಬಿಡಕೂಡದುವ್ರತ ಉಪವಾಸವಾರತಿಯಕ್ಷತೆಯು ಮುಂಜಿಯುಸುತೆಗೆ ಮದುವೆಯೆಂದು ಮತಿಗೆಡಿಸಿದೆಯಲ್ಲ 1 


ಅರೆಘಳಿಗೆಯು ನಿಲ್ಲಲು ವೇಳೆಯ ಕೊಡದೆರಗಿಸಿ 'ಷಯದೊಳು ನಾನಾ ಬಗೆಹರುಬಿಗೆ ಹರುಸಲು ಮನವನೀಕೊರಗಿಸಿ ಕುಣಿಸುತಲು ಒಂದೇ ಕ್ಷಣಹರಿನಾಮ ಸ್ಮರಣೆಗೆ ತೆರಹುದೋರಿಸದಾಯುಹರಿದು ಪೋಗುವ ಹಾಗೆ ಕರಗಿಸಿದುದೆ ಸಾಕು 2


ಶ್ರವಣಕೆ ಮನ'ತ್ತೆಯಾ ನಾಮ ಸ್ಮøತಿ ಸ'ಯ ಸೇ'ಸಬಿಟ್ಟೆಯ ಸಜ್ಜನರೊಳೊಂದುವ ದಾರಿಯ [ತೋರಿ]ದೆಯ ಎಂದಾದರು ಶಿವಸೇವೆಗಳ ತಂದೆಯ 'ೀಗಾಗುವ ಹವಣನರಿಯದೆ ಸಂಗವ ಮಾಡಿ ನಿನ್ನೊಳಗ'ವೇಕವನು ಪಡೆದವನಾದೆನಯ್ಯಯ್ಯೊ 3


ಕಂಡವರೊಡವೆಯನು ತಂದು ಕರೆದು'ಂಡು ಬಳಗವನ್ನು ಮನ್ನಿಸಿಯವರ್ಕೊಂಡಾಡೆ ಹರುಷವನು ತೋರಿಸಿ ಬಹಭಂಡಾಟನಡತೆಯನು ಕರೆಸಿಯನ್ನಗುಂಡಿಗೆ ನೂಕಿಸೆ ಕಂಡೆ ನಿನ್ನಾಟವಮೊಂಡಮುಂಡೇದೆನ್ನೀ ಕೂಗಕೇಳಿ ಬೇಗ 4


ಶ್ರೌತ ಸ್ಮಾರ್ತದ ಬಟ್ಟೆಯ ಹೊಂದುವರೆ ನೀನೋತು ಮಾರ್ಗವ ತೊಟ್ಟೆಯ ಅನ್ಯಾಯದ ರೀತಿಯ ನೀ ಬಿಟ್ಟೆಯ ನರಕಬಪ್ಪ ಭೀತಿಯ ನೀತೊಟ್ಟೆಯ ಯೇನೆನ್ನದೆಲೆಕಾತರಿಸುತ ಕಾಮಕಾತು ಕ್ರೋಧವ ಮಾಡಿಮಾತಿಗಾದರು ಒಮ್ಮೆ ಸೋತವನಾದೆಯ 5


ಕಲಹವ ಜನರೊಳಗೆ ಗಂಟಿಕ್ಕಿತುತೊಲಗಿಸಿ ಬಯಲೊಳಗೆ ನಿಲ್ಲಿಸಿಯೆನ್ನಹಲವು ಬಗೆಯ ಮಾತಿಗೆ ಗುರಿಯ ಮಾಡಿಬಳಲಿ ಬಾಡುವ ರೀತಿಗೆ ಕಂಗೆಡಿಸಿದೆಕಾಲದೊಳು ಧನದೊಳು ಬಲದೊಳು ಛಲದೊಳುನೆಲೆಗೊಂಡು ನೀಯೆನ್ನ ಥಳಿಸಿದುದೇ ಸಾಕು 6


ಅರಿಯದಾದೆನು ನಿನ್ನನು ಅದರಿನಿಂದಹುರಿದೆ ನೀನೆನ್ನುವನು ಚಿಕ್ಕನಾಗಪುರದೊಳಗಜ್ಞರನು ರಕ್ಷಿಸಲಾಗಿಗುರುವಾಸುದೇವಾರ್ಯನು ನೆಲಸಿಹನುಮರೆಯೊಕ್ಕೆರಗಿ ನಿನ್ನ ಪರಿಯ ಪೇಳಲು ಜ್ಞಾನದುರಿಯೊಳು ದ'ಪನೆಚ್ಚರ ನಿಲಬೇಡಿನ್ನು 7

***


No comments:

Post a Comment