ಹ್ಯಾಂಗಾದರ್ಹಾಂಗಾಗಲಿ ಎ-
ನ್ನಿಂಗಿತವ ನೀ ಬಲ್ಲೆ ರಂಗಯ್ಯಪ
ರಂಗಾ ನಿನ್ನಂತರಂಗ ಏಕಾಂತ ಭಕುತರ ಸಂಗ
ಮಂಗಳಾಂಗ ನೀ ಕೊಟ್ಟು ಸಲಹೋ ಶುಭಾಂಗ ಅ-
ನಂಗಜನಕ ಭುಜಂಗಶಯನ ಮಾ-
ತಂಗವರದ ಶ್ರೀ ರಂಗನಾಥನೇ1
ದೇವಾ ನಾ ಸದ್ಭಾವದಲ್ಲಿ ನಿನ್ನ ಪಾದ
ಪದುಮ ನಿರುತ ಧೇನಿಸುವೆ ಪವಮಾನ
ಜೀವೋತ್ತಮ ನೀ ಧರ್ಮೋತ್ತಮನೆನ್ನುವ
ಭಾವ ಎನಗಾವಕಾಲದಿ ಇರಲಿ
ಬೇಡೆನು ಇತರ ಸಂಪದವಾ 2
ಶ್ರೀಶಾ ಶ್ರೀ ವೆಂಕಟೇಶ ನಿರ್ದೋಷ ಗುಣ
ಸಂಪೂರ್ಣದಿಂದಿಹ ವೇಷ ಶೇಷಾದ್ರಿಮಂದಿರ
ವಾಸನೆ ನಿನ್ನ ದಾಸಜನಭವಪಾಶ ಕ್ಲೇಶ-
ನಾಶನವ ಗೈಸಿ ಸಲಹುವುದು ಶೇಷಶಯನ ಶ್ರೀ ರಂಗಶಾಯಿ 3
****
No comments:
Post a Comment