ಜಯತೀರ್ಥ ಮುನಿವರ್ಯ ಪ
ದಯತೋರಿ ಪೊರೆಯಯ್ಯ ವಿಜಯಸಾರಥಿಪ್ರಿಯ ಅ.ಪ
ಶ್ರೀಶಶಯನಾವೇಶ ಮಹೇಶ ಪ್ರತಿಬಿಂಬ ಸು
ರೇಶ ಯತಿಕುಲಾಧೀಶ ಪಾಲಿಸಯ್ಯ
ಏಸು ನಿನ್ನಯ ಕರುಣರಾಶಿ ಎಂತಿಹುದಯ್ಯ
ಆಸೆ ಸಲಿಸಲು ಮನೆಗೆ ಲೇಸಾಗಿ ನೀ ಬಂದೆ 1
ಪಶುಪತಿಯ ಮತ ದಹಿಸಿ
ಅಸುಪತಿಯ ಮತ ಮೆರೆದೆ
ವಸುಮತಿಯ ಸುರನಾಗಿ ಬಂದು ನಿಂದೆ
ಪಶುಪ್ರಾಯನೆಂದೆನ್ನ ಉದ್ಧರಿಸಲೋಸುಗದಿ
ಬಿಸಜತವಪಾದ ಪಾಂಸವನಿತ್ತೆ 2
ಜಯಗುರುವೆ ಶ್ರೀ ವಿಜಯದಾಸರಲ್ಲೆನ್ನ ಮನೋ
ಜಯವು ಪುಟ್ಟಿಸಿದ ನಿನ್ನ ಕರುಣವೆಂತೊ
ಸೃಜಿಸಿ ತೋರಿದ ಸ್ವಪ್ನ ನಿಜವು ಆಗಲಿ ಎಂದು
ಬಿಜಯ ಮಾಡಿದೆ ನಿನ್ನ ನಿಜದಾಸರೊಡನೆ 3
ಜಯಗುರುವೆ ನಿಮ್ಮ ಹುದ್ಗುಹದಲಿ ನಲಿಯುತಿಹ
ವಾಯುವಂತರ್ಗತ ಕೃಷ್ಣನ ತೋರೋ
ಜಯತು ಶ್ರೀ ವೇಣುಗೋಪಾಲ ಮೂರ್ತೇ
ಜಯತು ಶ್ರೀ ವೇಣುಗೋಪಾಲನೆಂದೆನಿಸಿಯ್ಯ 4
ಸೃಷ್ಟಿಗೆ ಬಂದು ನಾನೆಷ್ಟು ಜನ್ಮವ ಕಳೆದೆ
ಪುಟ್ಟಿದೆನೋ ನಾನೀಗ ಈ ಜನ್ಮದಿ
ಪುಟ್ಟಲಿಲ್ಲವೋ e್ಞÁನ ಹರಿ ಗುರುಸ್ಮರಣೆಗೆ
ಇಟ್ಟಕಡೆಗಣ್ಣÂನೋಳಿಷ್ಟು ನೋಡಯ್ಯ5
ವಾದಿಮಸ್ತಕ ಭೇದಿ ಮೋದತೀರ್ಥರ ತತ್ತ್ವ
ಸಾಧಿಸಿದ ಸಾಧುವೇ ಸುಧೆಯನುಣಿಸಿ
ಛೇದಿಸಿ ವಾಕ್ ಯುದ್ದ ಯೂಥಪಗಳನೆಲ್ಲ
ಗೆದ್ದು ಸತ್ತತ್ತ್ವದಾ ಸಿಂಹನಾದವ ಮಾಡ್ದೆ 6
ಮಧ್ವರಾಯರಿಗೆ ನೀ ಮುದ್ದುಮೊಮ್ಮಗನಯ್ಯ
ಸದ್ವಿದ್ವದ್ಗ್ರಂಥ ಭಾರವನೆ ವಹಿಸಿ
ಮುದ್ದು ತೊತ್ತೆನಿಸಿ ಎತ್ತಾಗಿ ಸೇವಿಸಿ
ಯತಿಯಾಗಿ ನಿಂದ ತತ್ತ್ವಮುತ್ತಿನ ಖಣಿಯೆ 7
ಇಳೆಯೊಳಗೆ ನಿನ್ನಂಥ ಕರುಣಾಳುಗಳ ಕಾಣೆ
ಅಳವಲ್ಲ ವರ್ಣಿಸಲು ನಿನ್ನ ಗುಣಗಳನು
ಕಳವಳಿಪ ಹೃದ್ವ್ಯಾಕುಲಗಳನೆ ಕಳೆಯೋ
ಮಳಖೇಡವಾಸ ಯತಿಕುಲಾಧೀಶಾ 8
ಗುರುವೆ ನಿನ್ನಯ ಕರುಣಕವಚ ತೊಟ್ಟವರ
ಚರಣಕಮಲದೊಳಿಹ ಮಧುಪನೆಂದೆನಿಸೋ
ನಿರುತ ದೃಢಭಕುತಿ ಶ್ರೀ ವೇಂಕಟೇಶನೊಳಿಟ್ಟು
ಪೊರೆಯೊ ಶ್ರೀ ಗುರುವರಾಗ್ರಣಿಯೆ ನಮೋ ಎಂಬೆ9
****
No comments:
Post a Comment