Monday, 2 August 2021

ರಾಮನ ನೋಡಿರೋ ನಮ್ಮ ಸೀತಾರಾಮನ ನೋಡಿರೋ ankita krishnavittala

ರಾಮನ ನೋಡಿರೋ ನಮ್ಮ ಸೀತಾರಾಮನ ನೋಡಿರೋ ಪ


ರಾಮನನೋಡುತ ಪ್ರೇಮವ ಸುರಿಸುತ

ನಾಮವ ನುಡಿಯುತ ನೇಮದಿ ಬೇಡುತ ಅ.ಪ


ಅಜಭವಾದಿಗಳರಸನೀತಾ ಮತ್ತೆ

ನಿಜಭಕುತರಿಗೆ ಮುಕ್ತಿಪ್ರದಾತ

ತ್ಯಜಿಸಿ ದುಷ್ಟರಸಂಗ ಭಜಿಸಿ ಶಿಷ್ಯರ ಸಂಗ

ಭುಜಗಭವವೆಂದರಿತು ನಿಜಸುಖಮೆಲ್ಲಲು 1


ನಿತ್ಯವೇದಗಳಿಂ ಪ್ರತಿ ಪಾದ್ಯ ಮತ್ತೆ

ನಿತ್ಯಾನಿತ್ಯ ಜಗಸೃಜಿಪ ದೇವದೇವೇಶ

ಮುಕ್ತಾಮುಕ್ತಾಶ್ರಯ ಸತ್ಯ ಪ್ರಾಣನ ಹೃಸ್ಥ

ಉತ್ತಮೋತ್ತಮನೆಂದು ಎತ್ತಿಕೈಗಳ ಮುಗಿದು 2


ಭಕ್ತಿಯಿಂದಲಿ ನೋಡೆ ಸರ್ವಾಘಹರವೋ

ಮತ್ತೆಪಾಡಲು ಕಾಮಿತ ಕರಗತವೊ

ಹಸ್ತಿವರದನ ನೋಡೆ ಮತ್ತರಿಗೆ ಸಾಧ್ಯವೆ

ವತ್ತುತ ಗೃಹಕೃತ್ಯ ಬೇಗ ಉತ್ತಮರಲ್ಲಿ 3


ಸುಲಭವಲ್ಲವೊ ಇಂಥಾ ಸಮಯ

ಘಳಿಸಿ ನೋಡೀದವನೆ ಕೃತಾರ್ಥ

ಕುಳಿತು ಹೃದಯದಿ ನಿತ್ಯ ಸಲಹುತ್ತಿರುವಂಥ

ಅಲವ ಮಹಿಮಾರ್ಣವ ಲಲನೆ ಲಕ್ಷ್ಮಿಯ ನಾಳ್ವ 4


ಸರ್ವನಾಮಕ ನಿವನೂ ಮತ್ತೆ

ಸರ್ವಪ್ರೇರಕ ಬಲಖ್ಯಾತ ನಿಹನೂ

ಸರ್ವ ಸರ್ವಾಧಾರ ಸರ್ವೇಶ ಶಾಶ್ವತ

ಸರ್ವಗುಣಗಣ ಪೂರ್ಣ ಸರ್ವವ್ಯಾಪ್ತನಾದ 5

ಆರಿಲ್ಲ ಸಮವಧಿಕ ಇವಗೇ ಮತ್ತೆ

ಆರು ಕಾಣರು ನೆಲೆಯ ಸಾಕಲ್ಯ ಸತ್ಯ

ಸಾರವಿಲ್ಲದ ಜಗದಿ ಸಾರನೊಬ್ಬನೆ ಇವನು

ತೊರು ಪಾದಗಳೆಂದು ಸಾರಿಬೀಳುತ ಅಡ್ಡ 6


ಶರಣೆಂದ ವಿಭೀಷಣಗೆ ಪಟ್ಟ ಕಟ್ಟಿದನೂ

ಕರುಣದಿಂದಲಿ ಶಬರಿಯ ಪೊರೆದವನು

ದುರುಳ ಪಾಪಿಯ ದೊಡ್ಡ ಕವಿಯ ಮಾಡಿದ ಮಹಿಮ

ಪರಮ ಪಾವನ “ಕೃಷ್ಣವಿಠಲ” ಪರಾತ್ಪರ

ಕರುಣ ಬೇಕಾದವರು 7

****


No comments:

Post a Comment