ಲಘುವಾವುದೆಂಬುದನು ನಿಜವಾಗಿ ನುಡಿಯುವೆನು
ಸುಗುಣವಂತರು ಕೇಳಿ ವಿನಯದಲಿ ಬೇಡುವೆನು ಪ
ಲಘುತೃಣವು ತಾನಲ್ಲದಿಟವೆ ಸರಿ ಈ ಮಾತು
ಲಘುತೃಣವ ತಾವುಂಡು ಪಾಲ್ಕೊಡವೆ ಗೋವುಗಳು ಅ.ಪ.
ನಾರಿಯನು ಸಾಕುವೆಡೆ ಕೈಲಾಗದ ಲಘುವು
ಭಾರಿಸಿರಿಯನು ಪತಿಗೆ ತಾರದಾ ಸೊಸೆ ಲಘುವು
ನಾರಿಯರ ಕೈಗೊಂಬೆಯಾಗಿರುವ ನರ ಲಘುವು
ಸಿರಿವಂತ ನೆಂಟರಲಿ ಬಡವ ಸೇರಲು ಲಘುವು 1
ವಿತ್ತವಿಲ್ಲದ ಪಿತನು ಪುತ್ರನಿಲ್ಲಿರೆ ಲಘುವು
ಪುತ್ರವತಿಯರ ನಡುವೆ ಸವತಿ ಬಂಜೆಯು ಲಘುವು
ಅತ್ತಿಗೆಗೆ ಬಹು ಲಘುವು ರಿತ್ತ ಮೈದುನ ಮಂದಿ
ಭತ್ರ್ಯತಾನತಿ ಲಘುವು ಶ್ರೀಮಂತ ಕನ್ನಿಕೆಗೆ 2
ಆಧುನಿಕ ಮಂಡಲಿಗೆ ಪೌರಾಣಗಳು ಲಘುವು
ಮೋದತೀರ್ಥರ ಮತಕೆ ಮಿಕ್ಕುದೆಲ್ಲವು ಲಘುವು
ವೇದನುತ “ಶ್ರೀಕೃಷ್ಣವಿಠಲ”ನ ನೆನೆಯದವ ಶುದ್ಧಲಘು
ತಮನೈಯ ವೃದ್ಧ ಸಮ್ಮತ ಹೌದು 3
***
No comments:
Post a Comment