Monday, 2 August 2021

ರಾಮ ನಾಮದಿ ಪಾಮರರಿಗೆ ಪ್ರೇಮ ಪುಟ್ಟುವುದೆ ankita gopalakrishna vittala

ರಾಮನಾಮದಿ ಪಾಮರರಿಗೆ

ಪ್ರೇಮ ಪುಟ್ಟುವುದೆ ಪ.

ಸ್ವಾಮಿ ಭೃತ್ಯ ನ್ಯಾಯವರಿಯದ

ಕಾಮಿಗಿದರೊಳು ನೇಮ ಬಪ್ಪುದೆ ಅ.ಪ.

ದಾಶರಥಿ ಎನಿಸಿ ಜಗದೊಳು

ಶ್ರೀಶನವತರಿಸೆ

ಕೌಶಿಕನ ಮಖ ಘಾಸಿಗೈಯ್ಯುವ

ದೋಷಿಗಳ ತಾ ನಾಶಗೈಸಿದ 1

ಶಿಲೆಯ ಪೆಣ್ಗೈದು ಲಲನೆ ಸೀತೆಯ

ಒಲುಮೆಯಿಂ ವರಿಸಿ

ಕುಲವನಳಿದನ ಛಲವ ಭಂಗಿಸಿ

ಲಲನೆ ಸಹಿತದಿ ನೆಲಸೆ ಪುರದಲಿ 2

ಮಾತೆ ವಚನದಿ ಸೀತೆ ಅನುಜ ಸ

ಹಿತ ವನಕೆ ಬರೆ

ಖ್ಯಾತಿ ರಾವಣನಾ ತಳೋದರಿ

ಪ್ರೀತಿಸಲು ವಿಘಾತಿಗೈಸಿದ 3

ಮಾಯಾಮೃಗ ಕಂಡು ಪ್ರಿಯ ನೀಡೆನೆ

ಸಾಯಕವನೆಸೆಯೆ

ಕಾಯ ಬಿಡುತಿರೆ ಹೇಯ ರಾವಣ

ಪ್ರಿಯಳನುಯ್ಯೆ ನೋಯ್ದ ಮನದಲಿ 4

ಬೆಟ್ಟವನೆ ಕಂಡು ಕುಟ್ಟಿ ವಾಲಿಯ

ಪಟ್ಟ ಕಪಿಗಿತ್ತು

ಶ್ರೇಷ್ಠ ಹನುಮಗೆ ಕೊಟ್ಟು ಉಂಗುರ

ಪಟ್ಟದರಸಿಗೆ ಮುಟ್ಟಿಸೆಂದ 5

ಕೇಳಿ ಶ್ರೀ ವಾರ್ತೆ ತಾಳೀ ಹರುಷವ

ಬೀಳು ಕೊಂಡಲ್ಲಿಂ

ತಾಳೆ ಕೋಪವ ಕೇಳಿ ವನಧಿ

ಸೀಳು ಆಗಲು ಶಿಲೆಯ ಬಿಗಿದ 6

ದುಷ್ಟ ರಾವಣನ ಕುಟ್ಟಿ ಶಿರವನು

ಪಟ್ಟದರಸಿ ಕೂಡಿ

ಶ್ರೇಷ್ಠ ಭರತಗೆ ಕೊಟ್ಟು ದಶರ್Àನ

ಪಟ್ಟವಾಳಿದ ದಿಟ್ಟಯೋಧ್ಯೆದಿ 7

ರಾಮ ರಾಮನೆಂಬಾ ಹನುಮಗೆ

ಪ್ರೇಮದಿಂದೊಲಿದು

ಧಾಮ ಅಜಪದ ನೇಮಿಸಿ ಮುಂದೆ

ಸೋಮನೆನಿಸಿದ ಭಾನು ವಂಶಕೆ8

ಬೆಟ್ಟದೊಡೆಯನ ಇಷ್ಟು ಮಹಿಮೆಯ

ಮುಟ್ಟಿಮನ ಭಜಿಸಿ

ದಿಟ್ಟ ಗೋಪಾಲಕೃಷ್ಣವಿಠ್ಠಲ

ಶ್ರೇಷ್ಠನೆನ್ನುವ ಶ್ರೇಷ್ಠಗಲ್ಲದೆ 9

****


No comments:

Post a Comment