..
kruti by shantibai dasaru ಶಾಂತಿಬಾಯಿ ದಾಸರು
ನೆನೆವೇ ನಾ ನಿತ್ಯ ಚರಣ ಕಮಲವನ್ನು
ಕರುಣಾಕರ ಭವ ಹರಣ ನಾರಾಯಣ ಪ
ಕನಸಿನ ಸಂಸಾರ ನೆನಸದಂತೆ ಎನ್ನಾ
ಮನಸ್ಸು ಶ್ರೀಹರಿನಿಜ ಬರಿವಿನೊಳ್ ನಿಲಿಸಯ್ಯಾ 1
ಮಂದ ಬುದ್ಧಿಲಿ ನಿಜಾನಂದವನರಿಯದೇ
ಬಂಧನೆಗೊಳಗಾದೆ ತಂದೆ ನೀ ರಕ್ಷಿಸೊ2
ದುರಿತಗಳೆಲ್ಲವ ಹರಣಗೊಳಿಸಿ ನಿಜ
ಸ್ಮರಣೆಯೊಳಿರುವಂತೆ ಕರುಣದಿ ನೋಡೆನ್ನಾ 3
ಶಬರಿಯ ಕಾಯ್ದೆಯಾ ಬದರಿಯ ಫಲವುಂಡು
ವಿಭು ಪರಮಾನಂದಾ ಪ್ರಭೆಯೊಳಗಿರಿಸೆನ್ನಾ 4
ನೆನೆವರ ಮನದಾ ಕೊನೆಯಲಿ ಮಿನುಗುವ
ಸನಕಸನಂದನ ವಂದಿತನೀದೇವಾ 5
ವಾಸುದೇವನೇ ನಿನ್ನ ದಾಸಿ ಶಾಂತಿಘನ
ವಾಸ ಸ್ವಸುಖವೀವ ಕೇಶವಾಶ್ರಮಗುರು 6
***
No comments:
Post a Comment