..
kruti by shantibai dasaru ಶಾಂತಿಬಾಯಿ ದಾಸರು
ಪಾಲಯಮಾಂ ಶ್ರೀ ರಾಮಾ ಮೂಲ ಸುಗುಣ ಶೀಲನೆ ಪ
ನೀಳ್ಗರೆವ ಹೃದಯನಿವಾಸಾ ಕಾಲಾಂತಕ ಕರ್ಮನಾಶಾ
ಚಾಳಿಕ ಚಿನ್ಮಯ ಸುರೇಶ ಹರೀ ಲೋಲಗುಣಾತೀತನೆ 1
ಚಂಡಕಿರಣ ಕುಲಜರಾಘವಾ ಸುಂದರಶ್ರೀ ಸೀತಾಧವಾ
ಛಂಧ ನಿಜಾನಂದ ವೀಯುವಾ ಬಂದಭಯನಿವಾರನೇ ನೀ 2
ದಶಮುಖರಾವಣ ನಿವಾರಣಾ ಅಸುರಾಸುರ ನಿಕ್ರಂದ ನಾ
ಕುಶಲ ವಿಭೀಷಣ ಪಾಲಯಸ್ವಾಮೀ
ಋಷಿಯಾಗವ ಕಾಯ್ದ ದೇವಾ 3
ಅಂಬುಜಾಕ್ಷಾನಂತರೂಪಾ ತುಂಬಿಹ ಸದ್ಗುರು ಸ್ವರೂಪಾ
ನಂಬಿದ ಭಕ್ತರನೆ ಪಾಲಿಪಾ ಚಿದಂಬರ ಶಾಂತಿದಾಯಕಾ 4
***
No comments:
Post a Comment