Thursday, 5 August 2021

ತಮ್ಮನರಿಯದೆ ತಮ್ಮೊಳೀತೆರನಾಡುವರು ಹಮ್ಮ ಬಿಡದೆ ankita rukmesha

 ..

kruti by rukmangadaru

ತಮ್ಮನರಿಯದೆ ತಮ್ಮೊಳೀತೆರನಾಡುವರು |ಹಮ್ಮ ಬಿಡದೆ ಪರಬಮ್ಮನ ಜರಿಯುವರು ಪ


ಒಂಬತ್ತು ಛಿದ್ರುಳ್ಳ ಕುಂಭದ ಗಾಲಿಗೆ |ಸ್ತಂಭದಂತೆ ನಿಲಿಸಿ ಸಂಭ್ರಮ ಪಡೆವರು 1

ಮುಂಡ ಬೋಳವ ಮಾಡಿ ಕಂಡಲ್ಲನ್ನವನುಂಡು |ದಂಡ ಧರಿಸಿ ಮನ ದಂಡಿಸದಿರುವರು 2

ಕದಲಿಸದೆ ಕಾಯಾ ಹದನದಿಂದಲಿರಿಸಿ |ವೇದದ ಮೊದಲೆಂದು ನಾದಕೆ ಬೆರೆವರು 3

ಓದಿ ಆಗಮಗಳನು ಭೇದಿಸಿ ತಿಳಿಯದೆ |ಮೇದಿನಿಯೊಳಗೆಲ್ಲ ವಾದಿಸಿ ಮೆರೆವರು 4

ಪಾಷಾಂಡ ಪಥ ಪಡೆದು ವೇಷ ಪಾಲಟ ಮಾಡಿ |ದೋಷಕಂಜದೆ ರುಕ್ಮ ಭೂಷಗೆ ಮರೆವರು 5

***


No comments:

Post a Comment