..
ಪರಮಪುರುಷ ನೀನೇ ಮಾಧವ ಪ
ಪರಮಪುರುಷ ನೀಪುರುಷೋತ್ತಮ ನೀ
ಸಿರಿ ಅಜ ಭವ ಸುರ ನರೋತ್ತಮಾರ್ಚಿತ ಅ.ಪ
ದೇವ ದೇವೋತ್ತಮ ದೇವ ಸಾರ್ವಭೌಮ
ಜೀವ ಜೀವಾಂರ್ತಗತ ಸರ್ವೋತ್ತಮ 1
ಅಣುತೃಣಗಣ ಮಹತ್ತತ್ವಾದಿಗಳ
ಅನಂತರೂಪಗುಣಗಳಲಡಗಿ ಮೆರೆವ ಪ್ರಭು 2
ಬ್ರಹ್ಮ ಸುರೇಂದ್ರಾರ್ಚಿತ ಪಾವನ ಪದ
ಚಿನ್ಮಯರೂಪ ಸುರಾಸುರ ವಂದ್ಯಾ 3
ಗರುಡಗಮನ ಸಿರಿರಮಣ ಚರಣನಖ
ಕಿರಣ ಕೋಟಿರವಿತೇಜಪ್ರಕಾಶಕ4
ಗಂಗಾಪಿತ ಅನಂಗಜನಕ ಹೇ
ಮಂಗಳಾಂಗ ರಘುರಾಮವಿಠಲ ಪ್ರಭು 5
****
No comments:
Post a Comment