Thursday, 5 August 2021

ನಿನ್ನಧೀನವು ಎಲ್ಲ ಘನ್ನ ಸುಮಹಿಮನೆ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಅಧೀನ ಸ್ತೋತ್ರ


ನಿನ್ನಧೀನವು ಎಲ್ಲ ಘನ್ನ ಸುಮಹಿಮನೆ ಪ


ಬೊಮ್ಮನ ಪಿತ ನೀನು ಅಮ್ಮ ಲಕುಮಿಪತೆ

ಎಮ್ಮನು ಪೊರೆ ಶ್ರೀನಿವಾಸ 1

ಬೃಹದಣುರೂಪನೆ ಮಹದಣು ಸರ್ವದಿ

ಬಹಿರಂತರದಿ ಇಹ ಮಹಾವಿಷ್ಣು ಪರಮಾತ್ಮ 2

ಸಿರಿಯು ನಿನ್ನೊಡಗೂಡಿ ಚರಿಪಳು ಎಲ್ಲೆಲ್ಲೂ

ಸರಿ ಯಾರು ನಿನಗಿಲ್ಲ ಪರರುಂಟೆ ಸಿರಿಸೇವ್ಯ 3

ನಿಜವರ್ಣ ಪ್ರತಿಪಾದ್ಯ ಅಜ ನರಹರೇ ನಮೋ

ಸೃಜಾಸೈಜ ಅಂಗಗಳೊಳ್ ಜ್ವಲಿಸುವೆ ಶಕ್ತೀಶ 4

ಪೋಷ ಕಲುಷಹ ಶೇಷಗಿರೀಶನೆ

ದೋಷವೇನಿಲ್ಲದ ಹೃಷೀಕೇಶ ಕ್ಷೇತ್ರಜ್ಞ 5

ಏಕಮಾದ್ವಿತೀಯ ಸರ್ವೋತ್ತಮ ಭೂಮನ್

ಸಾಕಲ್ಯ ನಿನ್ನ ತಿಳಿಯಲು ಅಶಕ್ಯ 6

ಪ್ರಾರ್ಥಿಸಲರಿಯೆ ನಾ ದಯದಿ ನೀ ಸಲಹೆನ್ನ

ವೃತತಿಜಾಸನ ತಾತ ಪ್ರಸನ್ನ ಶ್ರೀನಿವಾಸ 7

***


No comments:

Post a Comment