Thursday, 5 August 2021

ಆನಂದ ಆನಂದವು ಈ ಜಗದಿ ಗೋವಿಂದನ ದಯದಿ ankita kamalanabha vittala

 ..

kruti by Nidaguruki Jeevubai

ಆನಂದ ಆನಂದವು ಈ ಜಗದಿ
ಗೋವಿಂದನ ದಯದಿ ಪ

ಆನಂದವು ಗೋವಿಂದನ ನಾಮವು
ಆನಂದದಿ ಸ್ಮರಿಸುವ ಸುಜನರಿಗೆಅ.ಪ

ಬಂಧು ಬಾಂಧವರೆಲ್ಲರು ಕೂಡುತಲಿ ಒಂದೇ ಮನಸಿನಲಿ
ಇಂದಿರೇಶನ ಸ್ಮರಣೆಯ ಮಾಡುತಲಿ
ನಂದ ಯಶೋದೆಯ ಕಂದನೆ ಪರನೆಂದು
ಚಂದದಿ ಕುಣಿದಾಡುತ ಸ್ತುತಿ ಮಾಡಲು
ಇಂದಿರೇಶನು ಭವ ಬಂಧನ ಬಿಡಿಸುವ-
ನೆಂದು ಮನದಿ ಆನಂದ ಪಡುವರಿಗೆ 1

ಪಕ್ಷಿವಾಹನ ಪುರುಷೋತ್ತಮ ಹರಿಯು ಆನಂದ ವತ್ಸರದಿ
ರಕ್ಷಿಸಿ ಪೊರೆವನು ಭಕುತರ ತ್ವರದಿ
ಅಕ್ಷರೇಢ್ಯ ಕಮಲಾಕ್ಷನೆ ಪರನೆಂ-
ದೀಕ್ಷಿಪ ಭಕುತರ ರಕ್ಷಿಸಿ ಪೊರೆವ ಪ-
ರೀಕ್ಷಿತಗೊಲಿದಂದದಿ ಪರಮಾತ್ಮನು
ರಕ್ಷ ಶಿಕ್ಷಕನೆಂದೆನುವ ಸುಜನರಿಗೆ2

ಕಮಲಾಪತಿ ಕಾಮನ ಪಿತ ಶ್ರೀಹರಿಯು ಕಾರುಣ್ಯ ನಿಧಿಯು
ಕಮಲಾಕ್ಷನು ಕಾಪಾಡುವ ಸುಜನರನು
ಕಮಲಭವೇಂದ್ರಾದ್ಯಮರರು ಪೊಗಳಲು
ಕಮಲನಾಭ ವಿಠ್ಠಲ ಜಯ ಜಯ ಎಂದು
ಸುಮನಸರೊಡೆಯ ಸುಂದರ ಶ್ರೀಹರಿ ತಾ
ಶ್ರಮ ಪರಿಹರಿಸುವನೆನುವ ಸುಜನರಿಗೆ3
****

No comments:

Post a Comment