Thursday, 5 August 2021

ಇಂದಿರೆ ನಾ ನಿನ್ನ ವಂದಿಸಿ ಬೇಡುವೆ ankita namagiri

 ..

kruti by ವಿದ್ಯಾರತ್ನಾಕರತೀರ್ಥರು vidyaratnakara teertharu 

ಲಕ್ಷ್ಮೀ ದೇವಿ


ಇಂದಿರೆ ನಾ ನಿನ್ನ ವಂದಿಸಿ ಬೇಡುವೆ

ಬಂದು ನೀ ಪಾಲಿಸೇ ಚಂದಿರವದನೆ ಪ


ಸಿಂಧು ಕುಮಾರಿಯೆ ಎಂದಿಗೂ ನಿನ್ನ ಪದ

ದ್ವಂದ್ವವ ಸೇವಿಪೆನೆಂದು ನಾ ಬೇಡುವೆ ಅ.ಪ


ದೇವಿ ನಿನ್ನಂಘ್ರಿಯ ಸೇವಿಸಿ ಪದ್ಮಭವ

ಭಾವಿ ಫಣೇಶ ಸುರಾಧಿಪರೆಲ್ಲರು

ಈ ವಿಧವಾದನುಭಾವವ ಪೊಂದಿರಲು

ಈ ವಿಷಯಕೆ ಶ್ರುತಿ ಸಾವಿರವಿರುವುದೆ 1


ಪನ್ನಗವೇಣಿಯೆ ನಿನ್ನನೆ ನಂಬಿರಲು

ಸಣ್ಣ ಮನುಜರ ವರ್ಣಿಪುದೇಕೆಲೆ

ಎನ್ನಪರಾಧವ ಮನ್ನಿಸಿ ಕೃಪೆಯನು

ಎನ್ನೊಳು ತೋರಲು ಧನ್ಯ ನಾನಾಗುವೆ 2


ತಾಮರಸಾಕ್ಷಿಯೆ ನಾಮಗಿರೀಶ ಶ್ರೀ

ಸ್ವಾಮಿ ನೃಸಿಂಹನ ಕಾಮಿನೀಮಣಿಯೇ

ಕೋಮಲಗಾತ್ರಯೆ ಶ್ರೀ ಮಹಾಲಕ್ಷ್ಮಿ ಎನ್ನ

ಧಾಮವ ಬಿಡದಿರೆ ಸೋಮ ಸಹೋದರಿ 3

***


No comments:

Post a Comment