ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ನೋಡಿ ಸ್ವತಶುದ್ಧ ಮಡಿ ಸದಾ ಸರ್ವದಾ ಇದೇ ಮಾಡಿ ಧ್ರುವ ಅರಹು ಎಂಬುದೆ ಮಡಿ ಉಡಿ ಮರಹು ಮೈಲಗಿ ಮುಟ್ಟಬ್ಯಾಡಿ ಗುರುಸ್ಮರಣೆ ನಿಷ್ಠೆಯೊಳುಗೂಡಿ ಪರಬ್ರಹ್ಮ ಸ್ವರೂಪದ ನೋಡಿ 1
ಕಾಮಕ್ರೋಧದ ಸ್ವರ್ಶವ ಬ್ಯಾಡಿ ನೇಮನಿತ್ಯ ಇದನೇ ಮಾಡಿ ಶಮದಮೆಂಬುದು ಕೈಗೂಡಿ ಪ್ರೇಮಭಾವ ಭಕ್ತಿಯ ಮಾಡಿ 2
ಮಿಥ್ಯಾ ಭೂತಕ ಮಡಿಮಾಡಬ್ಯಾಡಿ ಚಿತ್ತಚಿದ್ಛನ ಸಮರಸ ನೋಡಿ ನಿತ್ಯ ಮಹಿಪತಿಗಿದೆ ಮಡಿ ನೋಡಿ
***
No comments:
Post a Comment