ಕಾಖಂಡಕಿ ಶ್ರೀ ಕೃಷ್ಣದಾಸರು
ಇನ್ನಾರೆ ತಿಳಿದು ನೋಡು ಮನರಾಯಾ |
ನಿನ್ನ ಕಣ್ಣದೆರೆದು ಸ್ವ ಹಿತದ ಉಪಾಯಾ ಪ
ನಾನಾ ಜನ್ಮದಲ್ಲಿ ಬಂದು ಧರೆಯಲ್ಲಿ ಸುಖ |
ವೇನು ಪಡೆದಿ ಹರಿಯ ಸ್ಮರಣೆ ಮರೆದಿಲ್ಲಿ 1
ಶರಗೊಡ್ಡಿ ಬೇಡಿಕೊಂಬೆ ನಾನೀಗಾ |
ಸ್ಥಿರವಾದರಿಲ್ಲ ದೂರ ಶಿವಯೋಗಾ 2
ಇಂದು ನಾಳೆವೆನ್ನಬೇಡಿ ನಿಶ್ಚಯಾ ನಿನಗ |
ಮುಂದ ಮತ್ತ ದೊರೆಯದಿದ ನರದೇಹಾ 3
ತಂದೆ ಮಹಿಪತಿಸ್ವಾಮಿ ದಯದಿಂದ |
ನಂದವ ಪಡೆದು ಗೆಲಿಯೋ ಭವದಿಂದಾ 4
***
No comments:
Post a Comment