ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಗುರುಪೂಜಿ ಮಾಡುವ ನಿಂದು ಮನದೊಳು ಹರುಷಪಡುವ P
ತಂದೆ ಸದ್ಗುರುಸೇವೆ ಮಾಡುವ ಬಂದ ಜನ್ಮದ ಹಾದಿ ಬಿಡುವ ಪಥ ಬ್ಯಾಗೆ ಹಿಡುವ ಹೊಂದಿ ಸದ್ಗತಿ ಮುಕ್ತಿ ಕೊಡುವ 1
ಬಂದು ಸಾರ್ಥಕ ಮಾಡುವ ಪಾದ ನೋಡುವ ತಂದು ರತಿಪ್ರೇಮ ನೀಡುವ ಒಂದು ನಾಮ ನಿಶ್ಚಯವಿಡುವ 2
ಒಂದು ಮನದಿ ಪೂಜಿಮಾಡುವ ಎಂದು ಬಿಡದೆ ನಾಮವ ಕೊಂಡಾಡುವ ಇಂದು ನಲಿನಲಿದಾಡುವ ಕಂದ ಮಹಿಪತಿಸ್ವಾಮಿ ನೋಡುವ 3
****
No comments:
Post a Comment