Wednesday, 1 September 2021

ಜೋ ಸಚ್ಚಿದಾನಂದನೆ ಜೋ ಜೋ ದೇವಕಿಕಂದನೆ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಜೋ ಸಚ್ಚಿದಾನಂದನೆ ಜೋ ಜೋ ದೇವಕಿಕಂದನೆ ಜೋಜೋ ಬ್ರಹ್ಮಾದಿವಂದ್ಯನೆ pa


ಹುಟ್ಟಿ ಬಂದು ನಿಜದೋರಿದೆ ಖೂನ ಮುಟ್ಟಿ ಬೀರುವ ಸುಚಿನ್ನಸಾಧನ ಇಟ್ಟ ಕಾವಲಿ ಹಾಕಿದೆ ಮೌನ ಮೆಟ್ಟಿಮರ್ದಿಸಿ ಬಂದೆ ಮಾವನ 1 

ಮಾಡಬಂದೆ ನೀ ಧರ್ಮಸ್ಥಾಪನಿಯ ನೋಡಬಂದೆನಿಷ್ಟ ಜನರಾರ್ಚನಿಯ ಆಡಬಂದೆ ನಂದಯಶೋದೆ ಮನಿಯ ನೀಡಬಂದೆ ನಿಜಸುಖಸಾಧನಿಯ 2 

ಶಿಷ್ಟಜನರಿಗಾಗಿ ಸಹಾಕಾರಿ ಸೃಷ್ಟಿಯೊಳು ತೋರಬಂದೆ ಶ್ರೀಹರಿ ದುಷ್ಟ ಜನರ ಮರ್ದಿಸುವಾವತಾರಿ ಕಂಸಾರಿ 3 

ದೇವಾದಿಗಳ ಮಗುಟಮಣಿಯೆ ಭಾವಿಸಲಳವಲ್ಲ ಸದ್ಗುಣಿಯೆ ಕಾವ ದೈವ ನೀನೆ ಕೃಷ್ಣ ಕರುಣೆಯೆ ದೇವಕಿ ಗರ್ಭನಿಧಾನದ ಖಣಿಯೆ 4 

ಬಲವಾಗಿ ಎನಗಬಂದೆ ಸರ್ವೇಶ ಒಲಿದು ಭಾನುಕೋಟಿತೇಜಪ್ರಕಾಶ ಫಲವ ನೀಡಿ ತೋರಬಂದೆ ಸಂತೋಷ ಸಲಹಬಂದೆ ಮಹಿಪತಿ ಪ್ರಾಣೇಶ 5 

ಮನೋಹರ ಮಾಡುವ ನೀನೆ ಸಹಕಾರಿ ಅನುದಿನ ಲೆವಕಲ ನೀನೆ ಮುರಾರಿ 6 

ಅನೆ ಕಾಯಲಿಪರಿ ನೀನೆ ಉದಾರಿ ಅನಾಥರಿಗೊಲುವ ನೀನೆ ಶ್ರೀಹರಿ 7 

ಪತಿತ ಪಾವನ ಪೂರ್ಣ ನೀನೆ ನಿಶ್ಚಯ ಹಿತದಾಯಕ ನೀನಹುದೊ ಮಹಿಪತಿಯ 8

***


No comments:

Post a Comment