Wednesday, 1 September 2021

ಧನ್ಯ ಸತ್ಸಂಗ ಎನ್ನೊಳು ಹೊಳೆಯಿತು ಘನಲಿಂಗ ankita mahipati

 ಧನ್ಯ ಸತ್ಸಂಗ ಎನ್ನೊಳು ಹೊಳೆಯಿತು ಘನಲಿಂಗ pa 


ನೋಡಿದವನ ನೋಟ ಮಾಡಿತೆನ್ನೊಳು ಜೀವ ಶಿವಕೂಟ ನೀಡಿದಾಭಯದೂಟ ಗೂಢಗುರುತವಾಯಿತು ನೀಟ 1 

ಹೇಳಿದವನ ಮಾತು ಹೊಳೆಯುವ ಸುಪ್ಪಾಣಿಯ ಮುತ್ತು ತಿಳಿಯಿತೆನ್ನೊಳು ವಸ್ತು ಅಳಿಯಿತು ಜನ್ಮ ಮೃತ್ಯು 2 

ಸತ್ಸಂಗವ ಕೂಡಿ ಪತಿತಪಾವನವಾದನು ನೋಡಿ ಕ್ಷಿತಿಯೊಳು ನಿಜಗೂಡಿ ಗತಿಪಡೆದನು ಮಹಿಪತಿ ನೋಡಿ 3

***


No comments:

Post a Comment