Wednesday, 1 September 2021

ಇದೇ ನೋಡಿರೋ ನಮ್ಮ ಊಟ ಮೇದಿನೊಯೊಳು ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಇದೇ ನೋಡಿರೋ ನಮ್ಮ ಊಟ ಮೇದಿನೊಯೊಳು ಪ್ರಗಟ ಧ್ರುವ ಪ್ರೇಮ ತಟ್ಟಿ ಬಟ್ಟಲು ತಳಗಿ ಕಾಮಕ್ರೋಧ ಸುಟ್ಟುಬೆಳಗಿ ನೇಮದಿಂದ ಬಡಸುವಾದಡಗಿ 1 
ಪಂಚಭಕ್ಷ ಪರಮಾನ್ನಾಮುಂಚೆ ಬಡಸುವದು ಗುರುವಚನ ಸಂಚಿತ ಪುಣ್ಯಸಾಧನ 2 
ತತ್ವಸಾರದೊಂದೇ ತುತ್ತು ಅತಿಹರುಷಗೊಂಡಿತು ನಿತ್ಯತೃಪ್ತಹೊಂದಿತು ಹಿತ ಮಹಿಪತಿಗಾಯಿತು 3
****

No comments:

Post a Comment