ಕಾಖಂಡಕಿ ಶ್ರೀ ಮಹಿಪತಿರಾಯರು
ಕಣ್ಣಾರೆ ಕಂಡೆವಿಂದು ಪುಣ್ಯತೇಜೋರಾಶಿಯ ಬಣ್ಣಬಣ್ಣದಲಿ ಭಾಸುವ ಪ್ರಭೆಯ ಪ
ಹೇಳಲಿಕ್ಕೆ ಬಾರದು ಹೊಳೆವ ಪ್ರಕಾಶವು ಥಳಥಳಿಸುತಿಹುದು ಒಳಹೊರಗೆ ಝಳಿಝಳಿಸುತಿಹದು ಮೊಳೆಮಿಂಚಿನ ಪರಿ ಸುಳವ್ಹುದೋರಿತು ಕಳೆವರದೊಳಗೆ 1
ಒದಗಿಬಂತಿದಿರಿಟ್ಟು ಮೊದಲಿನ ಪುಣ್ಯದ ಫಲ ಸಾಧಿಸಿ ಕಂಡೆ ಸುಖಸದೋದಿತವ ಹಾದಿ ಸಿಲ್ಕಿತು ನೋಡಿ ಆದಿ ಅನಾದಿಯ ಭೇದಿಸಿತು ಮನಸು ನಿಜಬೋಧವ 2
ಭಾವ ಬಲಿದು ನೋಡಿ ದೇವಾಧಿದೇವನ ಸುವಿದ್ಯ ಸುರಸವ ಸವಿಸವಿದು ಪಾವನ್ನವಾಯಿತು ಮಹಿಪತಿ ಜೀವನವುಕಾವಕರುಣ ಗುರುದಯದಿಂದ3
****
No comments:
Post a Comment