Wednesday, 1 September 2021

ಶ್ರೀಗುರುರಾಯ ನಿಮ್ಮ ಕರುಣ ಭಯಕೃದ್ಭಯ ನಾಶನ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಶ್ರೀ ಗುರುರಾಯ ನಿಮ್ಮ ಕರುಣ ಭಯಕೃದ್ಭಯ ನಾಶನ ಪ  


ಕಂದ ಪ್ರಹ್ಲಾದಗಾಗಿ ಸಂದು ವಿಗ್ರಹದೊಳು ಬಂದು ರಕ್ಷಿಸಿದೆ ಪ್ರಾಣ ಚೆಂದವಾಗಿ ನೀ 1 

ದ್ರೌಪದಿಯ ಅಭಿಮಾನ ಕೃಪೆಯಿಂದ ನೀ ಪೂರ್ಣ ಉಪಾಯದಲಿ ಕಾಯಿದೆ ಅಪಾರ ಮಹಿಮೆ 2 

ಕರಿಯ ಮೊರೆಯ ಕೇಳಿ ಕರಿಯ ಬಿಡಿಸಿದೆಂದು ಮೊರೆಯ ಹೊಕ್ಕೆ ನಾ ನಿಮಗೆ ಹರಿ ಹರಿಯೆಂದು 3 

ಸ್ಮರಿಸಿದಾಕ್ಷಣ ಬಂದು ಕರುಣದಿಂದ ನೆರೆದೆ ಪರಿ ಪರಿಯಿಂದ ಹೊರೆದೆ ವರಮುನಿಗಳ 4 

ಶರಣು ಹೊಕ್ಕಿಹೆ ನಿಮ್ಮ ತರಳ ಮಹಿಪತಿ ಪ್ರಾಣ ಹೊರೆದು ರಕ್ಷಿಸೊ ಎನ್ನ ಪರಮಪಾವನ 5

***


No comments:

Post a Comment