Wednesday, 1 September 2021

ಶ್ರೀಗುರು ಕರುಣವು ಸೋಜಿಗವು ಕೌತುಕವು ankita mahipati

 ಶ್ರೀ ಗುರುಕರುಣವು ಸೋಜಿಗವು ಕೌತುಕವು ಪ  


ಗುರುಹಸ್ತ ಪರುಷಸದೃಶ ನಿದರುಶÀದೋರುತಿಹ್ಯ ಅಗಣಿತ ತೇಜೋಮಯ ಪ್ರಕಾಶ ಇದು ಅನಿಮಿಷ ನೇತ್ರಲಿ ನೋಡುವದು ನೋಡುವದು ಘನ ಮಹಿಮೆಯೊಳು ಬೆರದಾಡುವದು ಬೆರದಾಡುವದು ತನ್ನೊಳು ತಾ ನಲಿದಾಡುವದು ನಲಿದಾಡುವದು ಅನುಭವ ಸುಖ ಸೂರ್ಯಾಡಿ ಸದ್ಗತಿ ಮುಕ್ತಿಯನೆ ಪಡೆವದು ಶ್ರೀಗುರುದಾಸರು 1 

ಗುರುವುಪದೇಶ ಜ್ಞಾನಪ್ರಕಾಶ ಅತಿಸಂತೋಷ ಛೇದಿಸುವುದು ಭವಪಾಶ ಇದು ನಿದ್ರಸ್ಯ ಕರ್ನಲಿ ಕೇಳ್ವದು ನಿದ್ರಸ್ಯ ಕರ್ನಲಿ ಕೇಳ್ವದು ಲಯ ಲೀಲೆಯೊಳು ಆಲಿಸುವದು ಆಲಿಸುವದು ಪರಿಪರಿ ಶ್ರುತಿಗ್ಹೇಳೆನಿಸುವದು ಹೇಳೆನಿಸುವದು ಪತಿತಜೀವನ ಪಾವನಗೈಸುವದು ಸದ್ಗುರು ಮಹಿಮೆಯ ತಿಳಿಯದು ತಿಳಿಯದೀ ಶ್ರೀಗುರು ದಾಸರು 2 

ಗುರು ನಿಜಬೋಧ ಬಲು ಅಗಾಧ ಪರಮ ಆಹ್ಲಾದ ತಿಳಿದವ ಜನ್ಮಕ ವಿರಹಿತವಾದ ಇದು ಅತಿಸೂಕ್ಷ್ಮಗತಿ ಭೇದಿಸುವದು ಭೇದಿಸುವದು ಗುರುಪಾದವೆಗತಿ ನಿಶ್ಚೈಸುವದು ನಿಶ್ಚೈಸುವದು ಸಮ್ಯಕಙÁ್ಞನವು ಸಾಧಿಸಿ ಆತ್ಮದಿ ಜೀವನ್ಮುಕ್ತನಾಗುವದು ಸದ್ಗುರು ಪಾದವು ಸಾಧಿಸಿ ಸಾಧಿಸಿ ಶ್ರೀಗುರುದಾಸರು 3 

ಗುರುಕೃಪೆಜ್ಞಾನನ ಅಳಿವುದಙÁ್ಞನ ತಿಳಿವದು ಯಾತನ ಕಳೆವದು ಜನ್ಮ ಜರಾಮರಣ ಇದು ಪೂರ್ವ ಕಲ್ಪನೆಯು ಕಲ್ಪನೆಯು ಆತ್ಮಙÁ್ಞನದ ವರ್ತನೆಯು ವರ್ತನೆಯು ಸಾಯಸವಳಿದು ಯತ್ನವು ಪ್ರಯತ್ನವು ಶ್ರೀಗುರು ಭಕ್ತಿಯು ಮಾಡಿರಯ್ಯ ಮಾಡಿರಯ್ಯ ಸದ್ಗುರುದಾಸರು4 

ಗುರುಙÁ್ಞನ ದೀಕ್ಷಾ ಕರುಣಾ ಕಟಾಕ್ಷ ಸದ್ಗತಿಮೋಕ್ಷ ತೋರುತಿಹ್ಯ ಗುರುತಾನೆ ಪ್ರತ್ಯಕ್ಷ ಇದು ಭಾಸ್ಕರ ಗುರು ಕೃಪಾದೃಷ್ಟಿಯು ಅಮೃತದ ದೃಷ್ಟಿಯು ಜೀವನ ಸಂತುಷ್ಟಿಯು ಮುರಿಯಿತು ಮಹಿಪತಿ ಹುಟ್ಟುವ ಹೊಂದುವ ಬಟ್ಟೆಯು ತ್ರಾಹಿ ತ್ರಾಹಿ ಗುರುನಾಥ 5

***


No comments:

Post a Comment