Wednesday, 1 September 2021

ತ್ರಾಹಿ ತ್ರಾಹಿ ಎನ್ನಿರೊ ತ್ರೈಲೋಕ್ಯದೊಡಿಯಗೆ ತ್ರಾಹಿ ತ್ರಾಹಿ ಎನ್ನಿರೊ ತಾರಕ ಬ್ರಹ್ಮಗೆ ankita mahipati

ತ್ರಾಹಿ ತ್ರಾಹಿ ಎನ್ನಿರೊ ತ್ರೈಲೋಕ್ಯದೊಡಿಯಗೆ ತ್ರಾಹಿ ತ್ರಾಹಿ ಎನ್ನಿರೊ ತಾರಕ ಬ್ರಹ್ಮಗೆ ಪ 


ಕಾಮ ಕ್ರೋಧ ಸುಟ್ಟು ಹೋಳಿಯಾಡುವ ಬನ್ನಿರೊ ಪ್ರೇಮ ಪ್ರೀತಿಯಿಂದ ಕುಣಿದಾಡುವ ಬನ್ನಿರೊ 1 

ಭೇದವಳಿದು ಸಾಧು ಜನರ ಕೂಡಿಕೊಂಬ ಬನ್ನಿರೊ ಮದ ಮತ್ಸರವ ಬೂದಿ ಮಾಡಿಚೆಲ್ಲುವ ಬನ್ನಿರೊ 2 

ಏಕರಂಗವಾಗಿ ಓಕುಳ್ಯಾಡವ ಬನ್ನಿರೊ ಜೀಕಳಿಯ ಮಾಡಿ ಮಾಯ ಮೋಹ ಎಸುವ ಬನ್ನಿರೊ 3 

ಎಲ್ಲರೊಳಗಿಹ ನಮ್ಮ ಪುಲ್ಲನಾಭ ಚಲುವನೊ ಬಲ್ಲ ಮಹಿಮನಿಗೆ ನೆಲೆಯ ನೋಡಿ ಒಲಿವನೊ 4

ಹೋಳಿಯಾಡಿದನು ನೋಡಿ ಇಳಿಯೊಳಗ ಮಹಿಪತಿಯು ಕಳೆದು ಕಲ್ಪನೆ ಕೋಟಿಲಿಂದ ಗೆದ್ದ ನೋಡಿರೊ 5

****

No comments:

Post a Comment