Wednesday, 1 September 2021

ಸ್ವಾನಂದದ ಘನಸುಖ ಏನೆಂದ್ಹೇಳಲಿ ಕೌತುಕ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಸ್ವಾನಂದದ ಘನಸುಖ ಏನೆಂದ್ಹೇಳಲಿ ಕೌತುಕ ಪ  


ಬಲಗೊಂಡದೆ ಬ್ರಹ್ಮಭಾವ ನೆಲಗೊಂಡದೆ ಸರ್ವದ ಬಲುದೋರುತದೆ ಸುಸ್ವಾದ ಸುಲಭ ಸದ್ಗುರು ಪ್ರಸಾದ 1 

ತಾನಾಗ್ಯದೆ ತಾರ್ಕಣ್ಯಸ್ವಾನುಭವದ ಸುಪುಣ್ಯ ಮುನಿಜನರೆ ಧನ್ಯಧನ್ಯ ಅಣುರೇಣುಕ ತಾ ಮಾನ್ಯ 2 

ಮನೋನ್ಮನದಾಶ್ರಯ ಭಾನುಕೋಟಿ ಉದಯ ದೀನ ಮಹಿಪತಿಗಿದೆ ಸಾಹ್ಯ ಅನುದಿನಿದೇ ಉಚ್ಛ್ರಾಯ 3

***


No comments:

Post a Comment