Friday 24 September 2021

ಮಂಗಳ ಜಯ ಮಂಗಳ ಮಂಗಳ ಶ್ರೀ ನರಸಿಂಗ ankita karpara narahari MANGALA JAYA MANGALA MANGALA SRI NARASINGA



ಮಂಗಳ ಜಯ ಮಂಗಳ

ಮಂಗಳ ಶ್ರೀ ನರಸಿಂಗ ಮೂರುತಿಗೆ ಪ


ಅಂಗುಟಾಗ್ರದಿ ಗಂಗೆಯ ಪಡೆದ

ಮಂಗಳ ಗಾತ್ರ ಶ್ರೀ ರಂಗನಿಗೆ

ಅಂಗಜರಿಪು ಧನು ಭಂಗವ ಮಾಡಿ ಸೀ-

ತಾಂಗನೆಯಳ ಕರಪಿಡಿದವಗೆ 1


ವರಮತ್ಸ್ಯಗೆ ಗಿರಿಧರ ಕ್ರೋಢಗೆ

ತರುಳನ ರಕ್ಷಿಸಿ ಧರೆಯ ಬೇಡಿದಗೆ

ಪರಶು ಧರಿಸಿದ ರಾಮಕೃಷ್ಣಗೆ

ಧರಿಸದೆ ವಸನವ ತುರಗನೇರಿದಗೆ 2


ಕರಿವರ ಕರೆಯಲು ಭರದಿ ಬಂದವಗೆ

ಸ್ಮರಿಪರ ಭಯ ಪರಿಹರಿಸುವ ದೇವಗೆ

ಶರಣು ಜನಕೆ ಸುರತರುವೆಂದೆನಿಸಿದ

ಸಿರಿ ಕಾರ್ಪರ ನರಹರಿ ರೂಪಗೆ 3

***


No comments:

Post a Comment