Thursday 2 December 2021

ಮಂಗಳವೆನ್ನಿರೆ ಮಹಾಲಕ್ಷ್ಮಿ ದೇವಿಗೆ ಅಂಗನೆ ankita kamalanabha vittala MANGALAVENNIRE MAHALAKSHMI DEVIGE ANGANE






kruti by Nidaguruki Jeevubai


ಮಂಗಳವೆನ್ನಿರೆ ಮಹಲಕ್ಷ್ಮಿ ದೇವಿಗೆ

ಅಂಗನೆ ಮಣಿಯರು ಸಂಭ್ರಮದಲಿ ಶುಭ ಪ


ಅರಿಶಿನ ಕುಂಕುಮ ಅರಳು ಮಲ್ಲಿಗೆ ಗಂಧ

ಸುರಪಾರಿಜಾತ ಪುಷ್ಪವರ್ಪಿಸಿ

ನರಸಿಂಹನರಸಿಗೆ ಪರಿಪರಿ ಫಲಗಳ

ಹರದೇರುಡಿಯ ತುಂಬುತಲಿ ಶ್ರೀ ಲಕ್ಷ್ಮಿಗೆ 1


ಸರಿಗೆ ಸರವು ಜರದ ನೆರಿಗೆ ಮೇಲೊಲಿಯಲು

ಅರಳು ಮಲ್ಲಿಗೆ ಜಾಜಿ ಸರವ ಮುಡಿದು

ಹರುಷದಿಂದಲಿ ನಾಗಮುರಿಗಿ ಕಂಕಣಕೈಲಿ

ಪರಿಪರಿ ವರಗಳ ಕೊಡುವಳಿಗೆ ಜಯ 2


ಕಡಗ ಕಾಲಂದುಗೆ ಘಲುರೆಂಬನಾದದಿ

ಬೆಡಗಿನಿಂದಲಿ ಬರುವ ಭಾಗ್ಯದಾಯಿನಿಗೆ

ಕಡಲಶಯನ ಕಮಲನಾಭವಿಠ್ಠಲನ ರಾಣಿ

ಬೆಡಗಿನ ನಡಿಗೆಯ ನಡೆವ ದೇವಿಗೆ ಶುಭ 3

***


No comments:

Post a Comment