ತಾರೋ ನಮ್ಮ ಬಂಡಿಯಾ ಗೋಪಾಲಕೃಷ್ಣ |ಪ|
ಅತ್ತರೇನು ಕಂಗಳಿಂದ ಮುತ್ತು ಸುರಿಯೋದಿಲ್ಲ ರಂಗ |
ಮತ್ತೆ ಬೆನ್ನ ಮೇಲೆ ಬಂಡಿ ಹೊತ್ತರೆ ನೀ ಬಿಡುವಿ ಏನೋ |೧|
ವಾರಿಜಾಕ್ಷ ನಿನ್ನ ಬಡಿವಾರವೇನೋ ಹೇರದೆ |
ಹಾರಿ ಹತ್ತಿಕೊಂಡು ಭಾರ ಬೆಟ್ಟವನ್ನು ಏರಿದೆ |೨|
ಕೊಟ್ಟು ಹೋಗೆಂದರ್ಯಾಕೆ ಸಿಟ್ಟು ಮಾಡುವಿಯೋ ಕೃಷ್ಣ |
ಶ್ರೀದ ವಿಠ್ಠಲ ಕೂಡ್ಯಾಡಿದ ಮೇಲೆ ಬಿಟ್ಟರೆ ನಿನ್ನ ಬಿಡುವರಲ್ಲ |೩|
***
tArO namma baMDiyA gOpAlakRuShNa |pa|
attarEnu kaMgaLiMda muttu suriyOdilla raMga |
matte benna mEla baMDi hottare nI biDuvi EnO |1|
vArijAkSha ninna baDivAravEnO hErade |
hAri hattikoMDu BAra beTTavannu Eride |2|
koTTu hOgeMdaryAke siTTu mADuviyO kRuShNa |
SrIda viThThala kUDyADida mEle biTTare ninna biDuvaralla |3|
***
No comments:
Post a Comment