Thursday, 5 August 2021

ವಧುವಾದೆ ಯಾರಿಗೆ ಮದನ ಗೋಪಾಲ ankita kamalanabha vittala

 ..

kruti by Nidaguruki Jeevubai


ವಧುವಾದೆ ಯಾರಿಗೆ ಮದನ ಗೋಪಾಲಗೊ

ಸುದತಿ ಯಶೋದೆ ನಂದ ಕಂದನಿಗೊ ಪ


ಶ್ರೀಶ ಶ್ರೀ ಕೇಶವ ನಾರಾಯಣನಿಗೊ

ಸೋಸಿಲಿ ಮಾಧವ ಗೋವಿಂದ ಹರಿಗೊ

ಸಾಸಿರ ನಾಮದ ವಿಷ್ಣು ಮಧುಸೂದನಗೊ

ಭೂಸುರ ಪಾಲ ತ್ರಿವಿಕ್ರಮ ವಾಮ£ಗೊ 1


ಮುದ್ದು ಮೂರುತಿ ಶ್ರೀಧರ ಹೃಷಿಕೇಶಗೊ

ಪದ್ಮನಾಭ ದಾಮೋದರಗೊ

ಶುದ್ಧಮನದಿ ಸಂಕರ್ಷಣ ವಾಸುದೇವಗೊ

ಪ್ರದ್ಯುಮ್ನ ಅನಿರುದ್ಧ ಮೂರುತಿಗೊ 2


ಪರಮ ಪುರುಷ ಪುರುಷೋತ್ತಮ ಅಧೋಕ್ಷಜಗೊ

ಹರುಷದಿ ನಾರಸಿಂಹ ಅಚ್ಚುತಗೊ

ಸರಸಿಜನಯನ ಜನಾರ್ದನುಪೇಂದ್ರಗೊ

ದುರಿತಕಳೆವ ಸಿರಿ ಹರಿ ಕೃಷ್ಣಗೊ 3


ಶಂಖು ಚಕ್ರ ಗದಾ ಪದ್ಮವು ಧರಿಸಿದ

ವೆಂಕಟರಮಣಗೊ ಶ್ರೀಹರಿಗೊ

ಪಂಕಜನಯನ ಶ್ರೀರಂಗನಾಥನಿಗೊ

ಬಿಂಕದಿ ಪಾಂಡುರಂಗ ವಿಠ್ಠಲಗೊ 4


ಘನಮಹಿಮ ಮನು ಕಂಚಿ ವರದರಾಜನಿಗೊ

ಇನಕುಲ ತಿಲಕ ಶ್ರೀರಾಮಚಂದ್ರನಿಗೊ

ವನಿತೆಯರೊಡಗೂಡಿ ಮೆರೆವ ಕೃಷ್ಣನಿಗೊ

ವನಜಾಕ್ಷ ಪಶ್ಚಿಮ ರಂಗಧಾಮನಿಗೊ 5


ಬಗೆ ಬಗೆ ನಾಮಗಳಿಂದ ಪೂಜೆಯಗೊಂಬ

ಅಗಣಿತ ಮಹಿಮಗೊ ಆಶ್ಚರ್ಯಗೊ

ಖಗವಾಹನ ಕರಿರಾಜ ವರದಗೊ

ನಿಗಮವೇದ್ಯ ನಿತ್ಯ ತೃಪ್ತನಿಗೊ 6


ಶ್ರದ್ಧೆಯಿಂದಲಿ ತನ್ನ ಭಜಿಪ ಭಕ್ತರ ಕಾಯ್ವ

ರೌದ್ರಿನಾಮ ಸಂವತ್ಸರದಿ

ಮುದ್ದು ಮೂರುತಿ ಕಮಲನಾಭ ವಿಠ್ಠಲನಿಗೆ

ಪದ್ಮಾಕ್ಷಿ ವನಮಾಲೆ ಹಾಕಿದೆಯಾ 7

***

No comments:

Post a Comment