Monday, 2 August 2021

ಗಜವದನಾ ಬೇಡುವೆ ತ್ರಿಜಗದೊಳ್ ನಿನಗ್ಯಾರು ಸರಿ ankita kalimardhanakrishna

ಗಜವದನಾ ಬೇಡುವೆ

ತ್ರಿಜಗದೊಳ್ ನಿನಗ್ಯಾರು ಸರಿ ಪ.


ಪೊರೆವರೆನ್ನ ಕಾಣಿ ಪುಸಿಯಲ್ಲೆನ್ನಾಣೆ ಅ.ಪ.


ಮೂಷಕ ವಾಹನ ನಮೋ

ಶೇಷಶಯನನ ತಂದು ತೋರಿಸುವೊ ನವೋ 1


ಚಾರದೇಷ್ಠನೆಂಬೊ ನಾಮದಿಂದ

ರುಕ್ಮಿಣಿ ಉದರದಲ್ಲಿ ಜನಿಸಿದಾತಗೆ ನಮೋ 2


ಎಷ್ಟು ವರ್ಣಿಪೆ ನಿನ್ನ ಮಹಿಮೆಗೆ ನಮೋ

ದಿಟ್ಟ ಮೂರುತಿ ನಮ್ಮ ಕಾಳೀಮರ್ಧನಕೃಷ್ಣ ದಾಸಗೆ ನಮೋ 3

****


No comments:

Post a Comment