Tuesday, 9 November 2021

ಕುಡಿಸೆನಗೆ ಹರಿ ನಿನ್ನ ನಾಮರಸವ ಕೊಡಬೇಡ ಅನ್ಯರಸ ankita jayesha vittala KUDISENAGE HARI NINNA NAAMARASAVA KODA BEDA ANYARASA





ಕುಡಿಸೆನಗೆ ಹರಿ ನಿನ್ನ ನಾಮರಸವ ಪ


ಕೊಡಬೇಡ ಅನ್ಯರಸ ಹಸಿದಿದ್ದರೂ ಇರುವೆ ಅ.ಪ


ಜನರ ಮನ್ನಣೆ ದೃಷ್ಟಿ ಕನಸಿನಲಾದರೂ ಬೇಡ

ಮನವು ನಿನ್ನಲಿ ಸತತ ನೆಲಸಿರಲಿ ಸ್ವಾಮಿ

ತೃಣವನು ಘನ ಮಾಳ್ಪ ಅನಿಲಮಂದಿರವಾಸ

ಪ್ರಣತಪಾಲಕ ನಿನ್ನ ಮೊರೆಹೊಕ್ಕೆನಯ್ಯ 1


ನಿಜ ಭಕ್ತ ಪದವೀಯೊ ಋಜುವರ್ಗ ಸಂಪೂಜ್ಯ

ಅಜ ಜನಕ ಜಗದೀಶ ಗೋಪಾಲ ಬಾಲ

ವೃಜಿನವ ದೂರ ಮಾಡಿ ಮಾಯಸೆರೆಯನು ಬಿಡಿಸಿ

ಕುಜನರ ಸಂಗ ಎನ್ನ ಹತ್ರ ಸುಳಿಯದಂತೆ ಮಾಡೊ 2


ಕೇಳಿಸು ನಿನ್ನ ಕಥೆ ನೋಡಿಸು ತವ ಮೂರ್ತಿ

ಬಾಳಿಸು ಮನ ನಿನ್ನ ಧ್ಯಾನದಲ್ಲಿ

ಫಾಲಕ್ಷ ಸಖ ಪೂರ್ಣ ಜಯೇಶವಿಠಲ

ಕಾಲಿಗೆ ಬಿದ್ದವನ ಕೈಹಿಡಿದು ಉದ್ಧರಿಸು 3

***

No comments:

Post a Comment